ಮಂಜಿಗೆ ನೆನೆಯದ

ಮಂಜಿಗೆ ನೆನೆಯದ ಮೈಯಿದ್ದರೆ ಅದು ಮೈಯಲ್ಲ ಕರುಣೆಗೆ ಕರಗದ ಮನವಿದ್ದರೆ ಅದು ಮನವಲ್ಲ ಗಾಳಿಗೆ ಅಲುಗದ ಎಲೆಯಿದ್ದರೆ ಅದು ಎಲೆಯಲ್ಲ ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು ಹುಲ್ಲಲ್ಲ ಹೂವಿಗೆ ಹಾರದ ಭ್ರಮರವಿದ್ದರೆ ಅದು ಭ್ರಮರವಲ್ಲ...

ಕಾಣದ ಕೈಯೆಂದು

ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ...

ನಿನ್ನ ಹೆಸರು

ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ...

ಯಕ್ಷ ಲೋಕ

ಎಲ್ಲಿಂದ ಬಂತೀ ಸುಮಧುರ ಗಾನ ಎಲ್ಲಿಂದ ಬಂದನೀ ಯಕ್ಷ ಎಲ್ಲಿಂದ ಬಿದ್ದ ಸುರ ಸ್ವಪ್ನ ಎಲ್ಲಿಂದ ತೆರೆದ ಗವಾಕ್ಷ ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ...

ಯಾರಿವನೋ

ಯಾರಿವನೋ ಇವ ಯಾರವನೋ ಎಲ್ಲಿಂದ ಬಂದಲ್ಲಿಗೆ ಹೋಗುವವ ದಿಕ್ಕುಗಳ ಧಿಕ್ಕರಿಸಿದವನೊ ಸುಖಶಾಂತಿಗಳ ಪೃಥಕ್ಕರಿಸಿದವನೊ ಸೀಮೆಗಳ ತೊರೆದವನೋ ಸಿಗದ ಯಾವುದಕೊ ಹಾತೊರೆದವನೋ ನದಿ ದಾಟಿದವನೊ ಬೆಟ್ಟ ಹತ್ತಿದವನೊ ಕಣಿವೆ ಕಾಡುಗಳ ನುಗ್ಗಿದವನೋ ಏಳು ಸಮುದ್ರಗಳ ದಾಟಿದವನೊ...

ಎಲ್ಲಾದರು ಒಂದು ದಿನ

ಎಲ್ಲಾದರು ಒಂದು ದಿನ ಎಂತಾದರು ಒಂದು ದಿನ ಕಾಣದಿರುವೆನೇ ನಾ ನಿನ್ನನು ಹಾಡುತಿರಬಹುದು ನೀ ಮಾತಾಡುತಿರಬಹುದು ನೀ ಸುಮ್ಮನೆ ಕುಳಿತಿರಬಹುದು ನೀ ಕುಣಿಯುತಿರಬಹುದು ನೀ ಬಸವಳಿದಿರಬಹುದು ಮುತ್ತಿನಂಥ ಬೆವರ ಹನಿ ನಿನ್ನ ಹಣೆ ಮೇಲಿರಬಹುದು-ಅಲ್ಲಿ...

ದೇವರ ಕಾಣಲು

ದೇವರ ಕಾಣಲು ಹೋದವರಿದ್ದಾರೆ ಕಾಡುಬೆಟ್ಟಗಳ ಹಾದು ಕಾಡ ಕಾಣಲಿಲ್ಲ ಬೆಟ್ಟವ ಕಾಣಲಿಲ್ಲ ದೇವರ ಕಾಣಲಿಲ್ಲ ಮರವ ಕಾಣದೆ ಕಾಡ ಕಾಣುವುದು ಬಯಲ ಕಾಣದೆ ಬೆಟ್ಟವ ಕಾಣುವುದು ಎಂತೊ ಮನುಷ್ಯ ಮನುಷ್ಯರ ಕಾಣದ ದೇವರ ಕಾಣುವುದು?...

ದೇಶವೆಂದರೆ

ಜೀವವೆಂದರೆ ಬರಿ ಒಡಲು ಅಲ್ಲ ಒಡಲಿಲ್ಲದೆ ಜೀವವು ಇಲ್ಲ ಒಡಲು ಜೀವಗಳ ಸಂಬಂಧವೇ ಜೀವನಾನುಬಂಧ ಅದು ಎನಿತು ಸುಂದರ ಫಲವೆಂದರೆ ಬರಿ ವೃಕ್ಷವಲ್ಲ ವೃಕ್ಷವಿಲ್ಲದೆ ಫಲವು ಇಲ್ಲ ವೃಕ್ಷ ಫಲಗಳ ಸಂಬಂಧವೇ ಜೀವನಾನುಬಂಧ ಅದು...

ಈ ಗತಿಶೀಲ ಜಗದಲ್ಲಿ

ಈ ಗತಿಶೀಲ ಜಗದಲ್ಲಿ ಅತಿಯಾಗದೆ ಇರು ಇತಿಯಾಗದೆ ಇರು ಶ್ರುತಿ ಮಾಡಿದ ವೀಣೆಯ ಹಾಗಿರು ನುಡಿಸುವ ಗಾಯಕ ನುಡಿಸುವ ವೇಳೆಗೆ ನಡೆಸುವ ಗುರು ನಡೆಸುವ ವೇಳೆಗೆ ತಡವರಿಸುವ ಭಯ ಯಾತಕೆ ಹೇಳು ಮಗುವಿನ ಸೋಜಿಗ...

ಕಲಿಸು ನನಗೆ ಕಲಿಸು

ಕಲಿಸು ನನಗೆ ಕಲಿಸು ಬೆಳಕ ನಾ ಬಯಸಿದಂತೆ ಕತ್ತಲ ಸ್ವಾಗತಿಸಲು ಬೆಳಕು ಕತ್ತಲುಗಳೆರಡೂ ಸೇರಿಯೆ ದಿನವೆಂದು ಸುಖವ ನಾ ಬಯಸಿದಂತೆ ದುಃಖವ ಸ್ವಾಗತಿಸಲು ಸುಖ ದುಃಖಗಳೆರಡೂ ಸೇರಿಯೆ ಬದುಕೆಂದು ಶುಕ್ಲವ ನಾ ಬಯಸಿದಂತೆ ಕೃಷ್ಣವ...