Day: May 14, 2024

ಉಮರನ ಒಸಗೆ – ೧೭

ಇಂದಿಗೆಂದಾಯಾಸಪಡುವಂಗಮಂತಿರದೆ ನಾಳೆಯಿನ್ನೇನೆಂದು ಕೇಳ್ವಂಗಮಿಂತು ಕತ್ತಲೆಯ ಗೋಪುರದ ಗುರು ಸಾರ್‍ವನ್ : “ಎಲೆ ಮರುಳೆ! ಇರದು ಸೊಗಮಿತ್ತ, ನಿನಗಿರದದತ್ತಾನುಂ.” *****

ಮೋಡಿ ಹಲವು

ಮೋಡಿ ಹಲವು ಮಾಯೆ ಹಲವು ಮೋಡಿಕಾರನೊಬ್ಬನೇ ಮಾಯಕಾರನೊಬ್ಬನೇ ಚಿತ್ರ ಹಲವು ಬಣ್ಣ ಹಲವು ಚಿತ್ರಕರನೊಬ್ಬನೇ ಎಂಥ ಚಿತ್ರ ರಚಿಸುತಾನೆ ಬಾನಿನಂಥ ಮೋಡದಂಥ ಬೆಟ್ಟದಂಥ ಕಣಿವೆಯಂಥ ಹೂದೋಟದಂಥ ವನದಂಥ […]

ಶರಾವತೀ ಜಲಪಾತ ನಿರ್ಘೋಷ

ಜಗವೆ ಯಾತ್ರಿಕನಾಗೆ ಚೆಲುವ ದೇವಿಗೆ ಹರಸಿ, ಚೇತನದ ಸೌಂದರ್ಯದೀಪ್ಸಿತವ ಸಲಿಸುವೀ ಪಾತದದ್ಭುತ ಭೀಮಕಾಂತ ಕಮನೀಯತೆಗೆ ಬಗೆ ಸೋತುದಂತಿರಲಿ, ಕಣ್ಣಾಸೆ ಮಿಕ್ಕಿರಲಿ; ಆಲಿಸಾದೊಡೆ, ಕೆಳೆಯ, ನಿನ್ನಾತ್ಮವರಳುವೊಡೆ, ಈ ನದಿಯ […]