ಚಿತ್ರ ಪೂರ್ಣಗೊಳಿಸಲಾರೆಯಾ?

೧ ಅಂಗಳದ ತುಂಬಾ ಮುತ್ತು ಪೋಣಿಸಿದ ಹಾಗೆ ಚುಕ್ಕಿಗಳ ಚಿತ್ತಾರ…. ಚಿತ್ತಾರದಲ್ಲಿನ ಚೌಕಗಳಲ್ಲಿ ನೀಲಿ, ಬಿಳಿ, ಗುಲಾಬಿ, ನೇರಳೆ ರಂಗುಗಳ ಕಲಸು ಮೇಲೋಗರ. ಭಾವಗಳ ಆಳ ಬಣ್ಣಗಳ ಮೇಳ ಚಿತ್ರದ ಜೀವಾಳ. ೨ ಪರಿಕರಗಳ...

ಈ ಗೆಳೆತನ….

ನನ್ನೆಲ್ಲಾ ಪದ್ಯಗಳಲ್ಲಿರುವಂತೆ ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ. ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ ಕಿಂಚಿತ್ತೂ ಕೋಪವಿಲ್ಲ. ಆದರೆ ನಾನು ಪ್ರೀತಿಸುವ ಗಾಳಿ, ಮೋಡ, ತಾರೆಯರನ್ನು ನಿಂದಿಸಬೇಡ. ಅವರ ಬಗ್ಗೆ ಯಾಕೆ...

ನಾನು ಮತ್ತು ಅವನು

೧ ಅವನ ಕಣ್ಣಲ್ಲಿ… ಬೆಟ್ಟಗಳು ಬೆಳೆಯುತ್ತಿದ್ದವು ತಾರೆಯರು ಹೊಳೆಯುತ್ತಿದ್ದವು. ಬಣ್ಣಗಳು ಅರಳುತ್ತಿದ್ದವು. ಮೋಡಗಳು ಹೊರಳುತ್ತಿದ್ದವು. ಮಳೆ ಸುರಿಯುತ್ತಿತ್ತು. ಹೊಳೆ ಹರಿಯುತ್ತಿತ್ತು. ಹಗಲು ಉರಿಯುತ್ತಿತ್ತು. ಇರುಳು ತಂಪೆರೆಯುತ್ತಿತ್ತು. ನನಗೊ… ಅಚ್ಚರಿ! ೨ ನಾನು ಬೆಟ್ಟವನ್ನೇರಿ ಮೋಡಗಳೊಂದಿಗೆ...

ಸಂವಾದ

ಆಕಾಶ ಇಬ್ಬನಿಯ ಹಾಗೆ ಕರಗುತ್ತಲಿದೆ. ಸೂರ್ಯ ಬಾವಲಿಯಾಗಿದ್ದಾನೆ. ಬೆಟ್ಟಗುಡ್ಡ, ಕಣಿವೆ-ಕಂದರಗಳು ಚಂದಿರನನ್ನು ನುಂಗುತ್ತಲಿವೆ. ಚುಕ್ಕಿಗಳ ಕಂಗಳಿಗೆ ಪೊರೆ ಬಂದಿದೆ. ಮೋಡಗಳು ರೆಕ್ಕೆ ಕಟ್ಟಿಕೊಂಡು ವಲಸೆ ಹೋಗುತ್ತಿವೆ. ಕಪ್ಪನ್ನು ಹೊದ್ದ ರಸ್ತೆಗಳು ಮುಸುಕಿನೊಳಗೆ ಬಿಕ್ಕುತ್ತಿವೆ. ನನ್ನ...

ಪದ್ಯವಾಗಲಿಲ್ಲ

ಕಡಲ ಕಪ್ಪೊಳಗೆ ನಕ್ಷತ್ರಗಳು ಅರಳಿದ್ದವು ಒಂಟಿ ಮೋಡಗಳು ರೆಕ್ಕೆ ಬೀಸುತ್ತಿದ್ದವು, ಚಂದಿರ ಈಸುತ್ತಿದ್ದ. ಸಾವಿರ ಸಾವಿರ ಹಳ್ಳಕೊಳ್ಳಗಳು ಕಡಲನ್ನು ಹೆಣೆದವು. ಅದೇ ಕಡಲು ಹೊಳೆಯಾಗಿ ಹಾಳೆಯ ಮೇಲೆ ಹನಿದು, ಹರಿದು ಪದ್ಯವಾಯಿತು. ಕಪ್ಪು ಕಡಲ...

ನಾ…. ಬರುತ್ತೇನೆ ಕೇಳು!

ಒಂದಲ್ಲ ಒಂದು ದಿನ ನಿನ್ನ ಕನಸಿನಲ್ಲಿ ಸದ್ದಿಲ್ಲದೆ ಸುಳಿದು ಬರುವವಳೇ…. ನಾನು ಜಾಡಿಸಿ ಒದ್ದೋಡಿಸಿದರೆ ಬಾಗಿಲ ಕಟಕಟಾಯಿಸಿವೆನು. ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ ತೂರಿ ಹೋಗುವ ಹಾಗೆ ಗೆಜ್ಜೆ- ಝಣಗುಟ್ಟಿಸುವೆನು, ಕಣ್- ತಪ್ಪಿಸಿಯಾದರೂ ಒಳನುಗ್ಗುವೆನು....

ಯಾಕೆ ಬರಲಿಲ್ಲ?

ತುಂಬ ತಡವಾಯಿತು ಗೆಳೆಯಾ ಈ ತನಕ ಇದ್ದೆ ಇನ್ನಿಲ್ಲ. ಬರುತ್ತೇನೆ ಎಂದು ಹೇಳಿದ್ದೆಯಲ್ಲ? ಯಾಕೆ ಬರಲಿಲ್ಲ? ನಾನು ಕಾದಿದ್ದೆ. ಚುಕ್ಕಿಗಳ ಎಣಿಸುತ್ತ ಇರುಳುಗಳ ಗುಣಿಸುತ್ತ. ನಾನು ಕಾದಿದ್ದೆ, ನನ್ನದೇನೂ ತಪ್ಪಿಲ್ಲ. ಹೌದು ನಾನು ಕಾದಿದ್ದೆ,...

ಇರುಳಿನಲ್ಲಿ ಬೆಳಗು

೧ ಸರಿರಾತ್ರಿಯಲ್ಲಿ ಹುಡುಗಿ ಕನಸು ಕಾಣುತ್ತಿದ್ದಾಳೆ. ಅವಳ ಕನಸು ಹೀಗಿದೆ: ಪೇಪರಿನವನ ಚರಪರ ಚಪ್ಪಲಿ ಸದ್ದಿನಲ್ಲಿ ಹಾಲಿನವನ ಅವಸರದ ಗುದ್ದಿನಲ್ಲಿ ಇಬ್ಬನಿಯಲ್ಲಿ ತೊಯ್ದ ಹೂವಿನೊಡತಿಯ ದನಿಯಲ್ಲಿ ಬೆಳಗಾಗಿದೆ ಮುಲ್ಲ ಅಲ್ಲಾನಿಗಾಗಿ ತುಟಿ ಬಿಚ್ಚಿದ್ದಾನೆ ಮೈಕಾಸುರ...

ಸ್ವಗತ

ಮುಂಜಾವದ ತಂಪೊತ್ತಿನಲ್ಲಿ ಕೆಂಪು ಹೃದಯದ ಹುಡುಗಿ ರಸ್ತೆಯಂಚಿನಲ್ಲಿ ನಿಂತಿದ್ದಾಳೆ. ಯಾಕೆ? ಎಂದು ಕೇಳಬೇಕು, ಹೇಗೆ ಕೇಳುವುದು? ನೆಲವನ್ನು ಜಗ್ಗಿ ಹಿಡಿದಿರುವ ಕಾಲು. ಸೋತು ತೂಗುತ್ತಿರುವ ಕೈಗಳು. ದಿಟ್ಟಿಸಿ ದಿಟ್ಟಿಸಿ ಆಳಕ್ಕಿಳಿದಿರುವ ಕಣ್ಣು ಇವಳನ್ನು ಸಂತೈಸಬೇಕು,...

ಪ್ರತೀಕ್ಷೆ

ಅವೊತ್ತು ಆಗಸದ ತುಂಬ ಮೋಡಗಳು ನೇತಾಡುತ್ತಿದ್ದವು. ಕಪ್ಪು ಹೊದ್ದು ಮಲಗಿದ್ದ ರಸ್ತೆಗಳಷ್ಟೇ ಕೈ ಬೀಸುತ್ತಿದ್ದವು. ನಿನ್ನ ಹೆಜ್ಜೆ ಹಾರಿಸಿದ ಧೂಳೊಂದಿಗೆ ಮಸುಕಾಗಿ ಮರೆಯಾದ ಬೆನ್ನ ಕಣ್ತುಂಬಿಕೊಂಡು ನಿಂತಿದ್ದೆ, ಮಾತು ಮರೆತವಳಂತೆ. ಇವೊತ್ತು ಮೈ ತುಂಬ...
cheap jordans|wholesale air max|wholesale jordans|wholesale jewelry|wholesale jerseys