
ಅಯ್ಯಯ್ಯ ನನಗಂಡ ಪಡಪೋಸಿ ಬಿಕನೇಸಿ ಹೊಸಗಂಡ ರಸಗಂಡ ಕೈಯತಾರ ||ಪಲ್ಲ|| ಸಪ್ಪಾನ ಸಪ್ಪಾಟಿ ಆ ಗಂಡ ಹಳೆರಗಟಿ ನನಗೆಣಿಯ ನೀ ಠೀಕು ಠುಮುಠುಮುಕಿ ತಾತಾರ ಬಾಬಾರ ಸರದಾರ ಸಾವ್ಕಾರ ನಿನ ಜೀವ ಗೆಳತ್ಯಾನು ಝುಮುಝುಮುಕಿ ||೧|| ಕುಂತುಂಡ್ರ ಪಡಿರೊಟ್ಟಿ ತಿಂತಾ...
ಕಲ್ಲಿನ ಮೂರುತಿ ಪೂಜಿ ಮಾಡುದು ನೂರು ಪಟ್ಟು ನೆಟ್ಟಾ ಮನುಸೆರ ದೇವರ ಪಾದ ಬೀಳುದು ನೂರು ಪಟ್ಟು ಕೆಟ್ಟಾ ||ಪಲ್ಲ|| ಆಶಿ ಬುರುಕರು ಮನುಸೆರ ದೇವರು ತಿಂದು ಹೇಲತಾವ ಕಲ್ಲು ದೇವರು ಊಟ ಉಣ್ಣದೆ ಮೌನ ಕೂಡ ತಾವ ||೧|| ಚರುಮದ ದೇವರು ನಾಯಿ ದೇವರು ರೊಕ್ಕ...
ಗುಬ್ಬೀಯ ನಿದ್ಯಾಗ ಸುಬ್ಬಿ ನೀ ಸೆಡುವೇನ ಗುಂಯ್‌ಗಡಕ ಗಿಣಿಹೆಣ್ಣ ಹೊರಹೋಗ ||ಪಲ್ಲ|| ಗುಲಗಂಜಿ ಗುಳಕವ್ವ ಗಿಲಗಂಜಿ ಉಳುಕವ್ವ ಎದಿಯಾಗ ಸೋಬಾನ ಹಾಡ್ಬೇಡಾ ಶಿರಬಾಗಿ ಕೈಮುಗಿವೆ ಕುಣಕೊಂತ ಹೋಗವ್ವ ಉದ್ದುದ್ದ ಕೋಲಾಟ ಆಡ್ಬೇಡಾ ||೧|| ಕಲಸಕ್ರಿ ಗುಡದಾಗ ...
ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ ...
ಕಂಡೇನ ಹೊಸತು ಕಂಡೇನೆ ನಾ ಆಂಜೇನೆ ಬೆವತು ಓಡೇನೆ ||ಪಲ್ಲ|| ಟ್ಯೂಬ್ಲೈಟು ಒಡದೈತೆ ಪುಡಿಪುಡಿ ಆಗೈತೆ ದೀಪಾವು ಆರಿಲ್ಲ ಬೆಳಗೇತೆ ಬಲ್ಬೊಂದು ಬಿದೈತೆ ಫಡ್ಡೆಂದು ಹಾರೈತೆ ಬಲ್ಬೀನ ದೀಪಾವು ಉಳದೇತೆ ||೧|| ಚಿಮಣೀಯ ಹಚ್ಚೇನೆ ಬಿರುಗಾಳಿ ಬೀಸೇತೆ ಚಿಮಣೀ...
ಖುಶಿ ಖುಶಿ ಹರೆಯಾವು ಕಸುವಿಂದ ಬಂದೇತೆ ವಡಪೇಳ ಈರಣ್ಣ ವಡಪೇಳ ||ಪಲ್ಲ|| ಗುಗ್ಗೂಳ ಎಂದ್ಹೇಳ ಶಸ್ತ್ರಾವು ಎಂದ್ಹೇಳ ಗರತೇರ ಮನಿಮನಿಗೆ ಕರಿತೇನ ಹೊಸ್ತಿಲಕ ಒಂದ್ಹೆಣ್ಣ ಮುತ್ತೈದಿ ಹೇಳ್ತೇನ ನಿನಗುಡಿಗೆ ಬಜಂತ್ರಿ ತರತೇನ ||೧|| ಜರತಾರಿ ನಾರ್‍ಯಾರ ಮು...
ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ ಗುಂಪಾ ಆಪೀಸು ಸಂಪಾ ...
ಪುಗಸೆಟ್ಟಿ ಕೊಡತೇನಿ ನನಮೈಕು ಪುರಸೆಟ್ಟಿ, ಭಾಸಣಕ ನೀ ಲೈಕು ||ಪಲ್ಲ|| ಹೊಡಿಹೊಡಿ ಭಾಸಣ ಹುಡೆಹಾರಿ ಬೀಳಂಗ ಹುಡಿಗೇರ ಕೊಡಪಾನ ವಡೆವಂಗ. ತುಡಿಗೇರ ಹಿಡಿವಂಗ ತುರುಬಾನ ಎಳೆವಂಗ. ಕಿವಿಯಾನ ಹಾಲಿಯು ಹರಿವಂಗ ಖಾರಾನ ಕುಟ್ಟಂಗ ಕುಟ್ಟಯ್ಯ ಭಾಸಣ ಕೇಳೋರು ...
ಸಾಕಾತ ಸಾಕಾತ ಇವ್ನ ಸಂಗ ಸಾಕಾತ ಸಾಕಾದ್ರು ತುಸು ತುಸು ಬೇಕಾತ ||ಪಲ್ಲ|| ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ ಬಾರಂದ್ರ ಜೋರ್‍ಮಾಡಿ ಓಡ್ತಾನ ||೧|| ನಿದ್ರ್ಯಾಗ ನೀರಾಗ ...
ಎಚ್ಚರಿಕಿ ಎಚ್ಚರಿಕಿ ನನಜಾಣಿ ಎಚ್ಚರಿಕಿ ಕತ್ಲಾಗ ಕಾಳಿಂಗ ಕಚ್ಚೈತೆ ||ಪಲ್ಲ|| ಬಚ್ಲಾಗ ಬಚೈತೆ ಹೊಚ್ಲಾಗ ಹೊಂಚೈತೆ ದಾರ್‍ಯಾಗ ಸುಳಿಸುತ್ತಿ ಕುಂತೈತೆ ಹಲಕಟ್ಟ ಹಳೆಹಾವು ಮಾಕೆಟ್ಟ ಅಡಮುಟ್ಟ ಮೋಸಕ್ಕ ಥಟಥಾಟು ಥೇಟೈತೆ ||೧|| ಗೆಜ್ಜಿ ಕಾಲಿನ ವಜ್ಜಿ ಹ...














