
ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...
ಕ್ರಾಂತಿಕಾರಿಗಳು ನಾವು ಕೇಳಬೇಕು ಇಲ್ಲಿ ನೀವು || ಇರುವ ಬಡವರಿಗೆ ಮನೆ ಬೇಡ ಇರದ ರಾಮನಿಗೆ ಮನೆ ಬೇಕು ಜಾತ್ಯತೀತತೆ ಬೇಡ ಧರ್ಮಾಂಧತೆಯೆ ಸಾಕು ಭವಿಷ್ಯ ಬೇಡ ನಮಗೆ ಜೋತಿಷವೊಂದೆ ಸಾಕು ವರ್‍ತಮಾನವು ಯಾಕೆ ಸನಾತನ ಇರುವಾಗ ಸಂವಿಧಾನವು ಯಾಕೆ ಇರುವಾಗ ಮ...
ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ /ಪ// ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇಳು ...
ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...
ಹೋದ ವರ್‍ಷ ಬಂದ ಹಬ್ಬ ಮರಳಿ ಬಂದಿದೆ ಅಂದು ನುಡಿದ ಶುಭ ಕಾಮನೆ ಜೆರಾಕ್ಸ್ ಕಂಡಿದೆ ನಾ ನುಡಿದೆ ಶುಭಾಶಯ ನೀ ನುಡಿದೆ ಶುಭಾಶಯ ಎಲ್ಲೆಲ್ಲೂ ಶುಭಾಶಯ ಇಲ್ಲ ಬರ ಇದಕೆ ಇಷ್ಟೆಲ್ಲಾ ಶುಭಾಶಯ ಪ್ರತಿ ವರ್ಷ ಪ್ರತಿ ಹಬ್ಬಕೂ ಆದರೂ ಹೆಚ್ಚುತ್ತಿದೆ ಯಾಕೆ ಇದಕೆ...
ಪ್ರೀತಿ ಮಧು ಹೀರಿದ ಮೇಲೆ ಗೆಳತಿ ಇರಲಿ ಸನಿಹದಲಿ ಮೇಲೆ ಬರಲಿ ಪ್ರಕೃತಿ ಚೆಲುವು ಸೋಲೆ ಇಲ್ಲ ನನ್ನಲ್ಲಿ ಉಕ್ಕಿ ಬರುವ ಸಾಗರದಲೆಯು ಸರಿಯಬೇಕು ಹಿಂದಕ್ಕೆ ಮೋಹನಾಸ್ತ್ರ ಹೂಡುವ ಮದನ ಕೂಡ ಅದೇ ನೇರಕ್ಕೆ ಇರುವಾಗ ಜೊತೆಗೆ ನಲ್ಲೆ ಗೆಲುವಿಗೆಲ್ಲಿದೆ ಎಲ್ಲ...
ಒಲವೇ ನನ್ನೊಲವೇ ಕಣ್ಣಲ್ಲಿ ತುಂಬಿರುವೆ ಸಿಗದೆ ನೀ ತೋಳಲ್ಲಿ ತನುವ ಕೊಲ್ಲುವೆ |ಪ| ಇನ್ನು ಏಕೆ ದೂರ ದೂರ ನೋಡು ಶ್ರಾವಣ ಹೃದಯ ಈಗ ಬಿರಿಯೆ ನೀನು ಕಾರಣ |ಅ.ಪ| ಕನಸು ನೀನು ಕವನ ನೀನು ಕನವರಿಸೊ ಮನಸು ನಾನು ನಿನಗಾಗಿ ಈ ಜೀವ ನೀನಿರಲು ಈ ಬಾಳು ಜೇನು ...
ಹೇಗೆ ಕಳೆಯಲಿ ತಾಯಿ ನೀನಿಲ್ಲದ ದಿನಗಳ ಎಂದೂ ಊಹಿಸಿಕೊಳ್ಳದ ನನ್ನ ಈ ದಿನಗಳ ನೀ ತೋರಿದ ಬೆಟ್ಟದ ಗುಡಿ ನಿನ್ನನ್ನು ಕೇಳಿದೆ ಮೌನವಾದ ನನ್ನ ನೋಡಿ ಕಾಡು ಮೌನ ಹೊದ್ದಿದೆ ನೀ ನುಡಿದ ನೂರು ಹಾಡು ಗಾಳಿಯಲ್ಲಿ ತೇಲಿದೆ ಏಕೊ ಏನೊ ರಾಗ ಬದಲು ಶೋಕ ಗೀತೆ ಹೊಮ...
ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ...













