
ರೈತೆಂಬ ಪದದೊಳಿಹುದೆಂಥ ತಾಕತ್ತು ರೈತೆಂದರದು ಸಂಪತ್‌ಸಹಿತಿರುವ ಮಹತು ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು – ವಿಜ್ಞಾನೇಶ್ವರಾ *****...
ಗಾಣದಲ್ಲಿ ಸಿಲುಕಿದ ಎಳ್ಳು ನೋಯದೆ ಎಣ್ಣೆಯ ಬಿಡುವುದೆ ಕಾಯದಲ್ಲಿ ಸಿಲುಕಿದ ಜೀವ ನೋಯದ ಕರಣಂಗಳ ಬಿಡುವನೆ ಭಾವದಲ್ಲಿ ಸಿಲುಕಿದ ಭ್ರಮೆ ನೋಯದೆ ವಿಕಾರವ ಬಿಡುವುದೆ ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ ನಿಃಕಳಂಕ ಮಲ್ಲಿಕಾರ್ಜುನಾ ವೇದ ಎಂದರೆ ಜ್ಞಾನವಂತ...
ರೈತ ಕಷ್ಟವನರಿತು ಕೊಳ್ಳುವ ಧನಿಕರೆಲ್ಲಿಹರು ಮತ್ತೆನ್ನ ಸಾಲ ಸಬ್ಸಿಡಿಯುರುಳ ಬಿಡಿಸುವರ್‍ಯಾರು ಹೊತ್ತುರಿವ ಧರೆಧಣಿಗೆಂತು ಬಂದೀತು ಸೂರು ಹೊತ್ತು ಜಾರುವ ಮುನ್ನೆಚ್ಚರಿಪ ಗುರುಗಳಾರಿಹರು ಆತ್ಮಾಭಿಮಾನವೆನ್ನೊಳಗೆ ಜಾರಿರಲಾರೆನ್ನ ರೈತನವನೆತ್ತುವರು &...
ಬಯಕೆ ಕಣ್ಣಿನಭ್ಯರ್ಥಿಗಳೆಷ್ಟೊಂದು ಎನ್ನ ಸುತ್ತ ಬಯ್ಕು ಬೇಕೆಂಬ ಮಗನ ಕಣ್ಣೆನ್ನತ್ತ ಬಾಯ್ಬಿಟ್ಟಂಬಾ ಎನುವ ತಾಯಿಗೇನಿಡಲಿ ತುತ್ತ ಹಾಯೆನಲು ಬಂದು ಪೋಪರೊಲೈಕೆಗಿಲ್ಲಾಗಿದೆ ಚಿತ್ತ ಮಾಯೆ ಬಯಕೆಗಳಬ್ಬರಕನ್ನ ಚಿತ್ತ ಹಾವಿನ ಹುತ್ತ – ವಿಜ್ಞಾನೇಶ್...
ಋತು ಮತಿಯನರಿಯುವ ಕಷ್ಟ ಮುತ್ತುವಾ ಕೀಟ ರೋಗಕರಿವ ಮದ್ದಿನ ಕಷ್ಟ ಅತ್ತಿತ್ತೋಡಾಡಲೆಮ್ಮ ಹಳ್ಳಿ ಮಾರ್ಗವು ಕಷ್ಟ ಹತ್ತಾಡುತಿರಲೂರವರೊಲಿಯೆ ಮಾಡುವ ಕಷ್ಟ ಮತ್ತೆಮ್ಮ ಮನೆಯಾಕೆಯೋಲೈಕೆ ಕಷ್ಟ ಕಷ್ಟ – ವಿಜ್ಞಾನೇಶ್ವರಾ *****...
ಎಲ್ಲಿ ನೋಡಿದರಲ್ಲಿ ರೈತ ಬವಣೆಗಳು ನೂರು ಬೆಳೆಯದಾವುದಾದರು ಈರುಳ್ಳಿ ಸುಲಿದ ನೀರು ಕೊಳತ ಟೊಮೇಟೋದೀಪರಿಗೆ ಬಂದೀತು ಕಾರು (ವಾಂತಿ) ಹೇಳಿ ಕೇಳಿ ಕಲ್ಪವೃಕ್ಷವೆಂದವರ ಆಸೆಗಳು ಚೂರು ಮೊಳೆತೆನ್ನಾರಂಭದಾಶಯಕೆಲ್ಲಿಹುದು ನೀರು – ವಿಜ್ಞಾನೇಶ್ವರಾ ...
ಬಿತ್ತನೆಯೊಳುತ್ತಮವು ಕಷ್ಟ ಸುತ್ತ ಕೊಳವೆ ಬಾವಿಯಾಳವು ಕಷ್ಟ ಎತ್ತಲಾ ನೀರನುತ್ತಮದ ವಿದ್ಯುತ್ ಕಷ್ಟ ಉತ್ತು ಬಿತ್ತುವಾಳುಗಳೊಲುಮೆ ಕಷ್ಟ ಎತ್ತ ಪೋದರು ಪೇಳ್ವರಲಾ ಕೃಷಿ ಕಷ್ಟ ಕಷ್ಟ -ವಿಜ್ಞಾನೇಶ್ವರಾ *****...
ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ಅವು ತಮ್ಮ ಅಂಗಸ್ವಭಾವದಂತೆ ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗಚೌಡಯ್ಯ ಗಾಳಿಯು ಸುಗಂಧವನ್ನು ಕೊಳ...
ಆವ ಬೆಳೆಗಾವ ದರವಪ್ಪುದೋ ಆ ಕಾಲ ಅವಕಪ್ಪ ಮೂಲ ಧನವನೆಂತು ಹೊಂದಿಸಲಿ ಸಾವಯವವೆನಲೋ ಸಾಲದಾ ಬಲವೆನಲೋ ನೋವಿಲ್ಲದೆನ್ನ ಬದುಕಿನಾಶಯಕಾವ ಕೃಷಿ ಮೇಲೋ ತವ ಕಾಯದಾನೆಂತು ದೋಸೆರೆವುದಿಲ್ಲಿ – ವಿಜ್ಞಾನೇಶ್ವರಾ *****...
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅಲ್ಲಮನ ವಚನ. ಬಹುಶಃ ಮನುಷ್ಯ ಮಾತ್ರವೇ ತಾನು ಏ...















