ರೈತೆಂಬ ಪದದೊಳಿಹುದೆಂಥ ತಾಕತ್ತು
ರೈತೆಂದರದು ಸಂಪತ್‌ಸಹಿತಿರುವ ಮಹತು
ಅತ್ತಿತ್ತಲೆಯದಲೆ ತುತ್ತುಣುವ ಸ್ವಾಭಿಮಾನದ ಗತ್ತು
ಅತ್ತತ್ತ ಹಾರಿತೆಲೋ ಪೇಟೆಡೆಗೆ ಈ ಹೊತ್ತು
ನಿತ್ಯ ನೂತನ ರೈತನಕಿದೆಂಥ ಪಾಡಾಯ್ತು – ವಿಜ್ಞಾನೇಶ್ವರಾ
*****