ಹಲೋ ಶ್ಯಾಮಲಿಽಽಽ
ಶ್ಯಾಮಲಿ ನೀ College roadದಾಗ
ಬಿದ್ದಿದ್ದಂತಽ
ಯಾರೋ ದಂಡಿಗೆ ಸರಿಸಿ ನೀರ
ಹೊಡೆದ್ರಂತಽ
ಆಮ್ಯಾಲ ಗುರುತಿನಾವ್ರು ರಿಕ್ಷಾದಾಗ ಹಾಕಿ
ಮನಿ ಮುಟ್ಟಿಸಿದ್ರಂತ –
ಸುದ್ದಿ ಬಂತು!!
What is the reason
are you alright ?
Absolutely, ಏನೋ ಚಕ್ಕರ ಬಂದಿರಬೇಕು
ಬಿಡು ಅದೇನ ಮಹಾ…..  ಗೀತಾ,
Drug addictಗೆ ಹೆಸರಾದ
businessmanನ ಮಗಳು
ಇಂದು collegeದಾಗ ನಿಂದು
ನಿಮ್ಮಪ್ಪಂದು ಮರ್ಯಾದೆ ಏನ ಉಳಿತು ಶ್ಯಾಮಲಿ?
Yes I know but can’t
control it, I can’t
ನಾನು phoneಕುಕ್ಕರಿಸಿದ್ದೆ
ಈಗ ಬೆಳಗಿನ ಸ್ಥಳೀಯ ಪತ್ರಿಕೆ
ತಿರುಗಿಸುತ್ತಿದ್ದಂತೆ
ಸುಪ್ರಸಿದ್ಧ ಉದ್ದಿಮೆದಾರರ ಒಬ್ಬಳೇ ಮಗಳು
‘ಶ್ಯಾಮಲಿ ಆತ್ಮಹತ್ಯೆ’
ಮೈ ನಡುಗಿತು
ಅದೇನ್ ಮಹಾಬಿಡು ಅಂತ
ತಾಸಗಟ್ಟಲೆ Phone ನ್ಯಾಗ
ಹರಟೆ ಹೊಡೆದ ಶ್ಯಾಮಲಿ ನೀನೇನಾ
ಕಣ್ಣಿಗೆ ಕತ್ತಲು ಆವರಿಸಿತ್ತು.
*****