ರಾಜನೀತಿಯಲ್ಲಿ ಜಯವೋ

ರಾಜನೀತಿಯಲ್ಲಿ ಜಯವೋ
ಬಂತೋ ಇಂಗ್ಲಂಡ ದೇಶಕ್ಕೆ ಬೆಂಕಿಯ ಮಳಿಯೋ ||ಪ||

ರಾಣಿ ರಾಜರ ವೈಭವಕೆ
ಪ್ರಾಣಹಾನಿಗಳಾದಾವು ಎಣಿ ಇಲ್ಲ ಇದಕೆ
ಜಾಣ ಕಲಿಗಳ ಸೈನ್ಯ ಹೊಕ್ಕಿತೋ
ಯೂರೋಪುಖಂಡಕೆಲ್ಲ ಮುಸುಕಿತೋ
ಕಾಣದಂಥಾ ಐದು ವ್ಯಕ್ತಿ
ಕ್ಷೋಣಿ ಗದಗದ ನಡುಗಿ ಹೋದೀತು ||೧||

ಹಿಂದುಸ್ಥಾನಕ ಬಂತು ಶೋಕ
ಮಂದಿ ಕುಂಡ್ಲಾಕ ನರಬೈಲಿ ಹೋತೋ ಕೈಲಾಕ
ಹಣದ ತೆರಿಗೆಯ ತೆಲಿಗೆ ಏಳು
ಎಣಿಸಿ ಹಡಗವ ತುಂಬಿ ಹೂರಣವ
ಹವಳ ದೇಶಕ್ಕೆಲ್ಲ ಇದು
ಕುಣಿದು ಕುಣಿದು ದಣಿವು ಆದಿತು ||೨||

ಬರದೆ ಬಾರದೆ ಸುಜ್ಞಾನ
ಗುರು ಶಿಶುನಾಳಧೀಶನ ಕುರುವಿನ ವಚನ
ಸತ್ಯ ಜಗಕೆಲ್ಲ ಇದು
ಬಿದ್ದಿತೋ ಜಗಳದ ಬೀಜ
ಮತ್ತೆ ಅಣ್ಣಿಗೇರಿ ಈಶನ
ಚಿತ್ರಗುಪ್ತರು ಕಾಣದೆ ಹೋದೀತು ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲೆವೆಲ್ ಕ್ರಾಸಿಂಗ್
Next post ಛಾಯೆ

ಸಣ್ಣ ಕತೆ

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…