ಒಮ್ಮೆ ಶಿಷ್ಯ ಗುರುಗಳಲ್ಲಿ ಬಂದು ಕೇಳಿದ, “ಗಿಡದ ವೃಕ್ಷಗಳು ಏಕೆ ಹಚ್ಚ ಹಸುರಾಗಿವೆ?”
“ಶಿಷ್ಯಾ! ಅವು ಸೂರ್‍ಯನ ನವ್ಯತೆಯನ್ನು ಪಾನ ಮಾಡುತ್ತವೆ. ಮತ್ತೆ ಗಾಳಿಯ ಕಾವ್ಯವನ್ನು ಹಾಡುತ್ತವೆ” ಎಂದರು.
“ಹೂವುಗಳ ಆನಂದಕ್ಕೇನು ಕಾರಣ?” ಮತ್ತೆ ಶಿಷ್ಯ ಕೇಳಿದ.
ಹೂವುಗಳು ಮಳೆ ಬಿಲ್ಲ ಬಣ್ಣ ಪಡೆದು, ಗಾಳಿ ಕಾವ್ಯದಿಂದ, ಆನಂದಗೊಂಡು ನರ್ತನ ಮಾಡುತ್ತವೆ. ಹಕ್ಕಿ ಹಾಡುವ ಝುನ್ ಝೇಂಕಾರದ ಸುವ್ವಾಲಿಗೆ ತಲೆ ತೂಗುತ್ತಿವೆ”-
ಎಂದರು ಗುರುಗಳು.
ಇದನ್ನು ಕೇಳಿ ಶಿಷ್ಯನ ಮನದಲ್ಲಿ ಸ್ಫೂರ್ತಿಯ ಹಾಡೊಂದು ಪ್ರಕೃತಿಯ ಪ್ರಸನ್ನತೆಯಿಂದ ಎದೆ ತುಂಬಿ ಗುನುಗಿತು.
ಆಗಸದ ಅಗಲಕ್ಕೆ
ರೆಕ್ಕೆ ಬಡಿದು ಹಾರಾಡಿ ಹಕ್ಕಿ
ಮತ್ತೆ ರೆಂಭೆಯಲಿ ಕುಳಿತು
ಹಾಡುತಿದ ಝೆನ್ ಝೇಂಕಾರ!
ಹೂವು ಕೇಳಿ ನರ್‍ತಿಸುತ್ತಿದೆ
ವೃಕ್ಷ ಹಸುರಾಗಿ ಉಸಿರು ಬಿಡುತ್ತಿದೆ
ಎಲೆ ಎಲೆಯು ಗಾಳಿಕಾವ್ಯ ಹಾಡುತ್ತಿದೆ!
*****








