ಯಾವ ದಿಗಂತದಿ ಏನು ಮೂಡಿತೋ
ನೋಡಿತೊಂದು ದೃಷ್ಟಿ.
ಕಾಂಬ ಕಣ್ಣುಗಳ ಗೊಂಬೆಗಳಲಿ ಅದು
ತೋರಿತಾಗ ಸೃಷ್ಟಿ.
ಮಾತು ಕಟ್ಟುತಿದೆ ನಾಟ್ಯರಂಗವನು
ಭಾವ ಪಾತ್ರವಾಗಿ
ಹೃದಯ ವೇದ್ಯ ನೈವೇದ್ಯ ಪುಷ್ಟಿ
ಸಂತುಷ್ಟಿಗಾತ್ರವಾಗಿ.
ಕೊಂಬೆ ಕೊಂಬೆಯಲ್ಲಿ ರೆಂಬೆ ರೆಂಬೆಯಲಿ
ಬೇರೆ ಬೇರೆ ಹೂವು
ಮೂಲ ಒ೦ದು ಹಲಸರ್ವನಾಮ
ಆ ತಾವು ನಾವು ನೀವು.
ಅಂಕಿತಕ್ಕೆ ಅಂಕಿತತೆ ಇರಲಿ
ಸದ್ಭಾವ ಮುದ್ರೆ ಬೇಕು.
*****








