Home / ಕಥೆ / ಕಿರು ಕಥೆ / ಆತ್ಮ ದರ್‍ಶನ

ಆತ್ಮ ದರ್‍ಶನ

ಕಣ್ಣ ಕಿಡಕಿಯಲ್ಲಿ ದೇಹ ಜಗವ ಕಂಡಿತ್ತು. ಕಿವಿಯಿಂದ ಜಗದ ಸಮ್ಮೋಹನ ಕೇಳಿತ್ತು. ಮೂಗಿನಿಂದ ಜಗ ಮೂಸಿತ್ತು. ಬಾಯಿಯಿಂದ ಜಗದ ಹಾಡ ಹಾಡಿತ್ತು. ಇದರಲ್ಲಿ ತನ್ನ ಇಡೀ ದೇಹದ ಅವಯವಗಳು ಜಗದ ಅರಿವಿಗೆ ಕಿಡಕಿ, ಬಾಗಿಲು, ಹೊಸಿಲಿನಂತಾಗಿ ಅರ್ಥವಿಸಲು ನೆರವು ನೀಡಿತ್ತು.

ಆದರೆ ಆತ್ಮ ದರ್‍ಶನಕ್ಕೆ ಯಾವುದು ಕಿಡಕಿ? ಆತ್ಮ ವೀಕ್ಷಣಕ್ಕೆ ಯಾವುದು ಹೊಸಿಲು, ಬಾಗಿಲು? ಹೃದಯಾಕಾಶದಲ್ಲಿ ಪ್ರಾಣಪಕ್ಷಿ ರೆಕ್ಕೆ ಬಡಿದು ಹಾರಬೇಕು. ಅಂತರಂಗ ಶೋಧ ಮಾಡಬೇಕು. ಒಂದೊಂದು ನಕ್ಷತ್ರವನ್ನು ಹೊಕ್ಕು ನೋಡಬೇಕು. ಮೋಡಗಳ ಸರಿಸಬೇಕು. ಚಂದ್ರ, ಸೂರ್‍ಯರನ್ನು ಕಣ್ಣಾಗಿಸಿಕೊಳ್ಳಬೇಕು. ಮಿಂಚನ್ನು ಓದಬೇಕು. ಬೆಳದಿಂಗಳಲ್ಲಿ ಮೀಯಬೇಕು. ಕಿರಣಗಳ ಜೋಡಿಸಿ ಮಾಲೆ ಕಟ್ಟಬೇಕು. ಅನಿರ್‍ವಚನೀಯ ನೀಲಿ ಆಗಸದ ಶುಭ್ರತೆಯ ನನ್ನದಾಗಿಸಿಕೊಳ್ಳಬೇಕು.

ಜಗದ ಕನಸ ಕರಗಿಸಬೇಕು. ಮನದ ಮಂದಾರ ಅರಳಿಸಬೇಕು. ಜಗದ ಕಾಯಿ ಹಣ್ಣಾಗಿ ಉದರಬೇಕು. ಝಗ ಝಗಿಸುವ ಆತ್ಮದ ದರ್ಶನವಾದೀತು.

ಎಲೆಯ ಮೇಲೆ
ಇಬ್ಬನಿಯ ಕನಸು
ಮೈ ಹರಡಿ
ಹೂವಾಗಿ ಅರಳುತ್ತಿದೆ
ಕಾಯಿ, ಹಣ್ಣಾಗಿ ಉದುರುತ್ತಿದೆ
ಮೇಲೆ ಆಗಸದಲ್ಲಿ
ಸೂರ್‍ಯ ಬೆಳಗುತ್ತಿದೆ.
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...