Home / ಕವನ / ಕವಿತೆ / ಇರವು ಮತ್ತು ಧರ್ಮಗಳ ಹಾಡು

ಇರವು ಮತ್ತು ಧರ್ಮಗಳ ಹಾಡು

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು
ಇದರ ತೆರವರಿವರಾರವನೊಬ್ಬ ಹೊರತು
ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ
ಜೀವಲೀಲೆಯ ಮರ್ಮವೊರೆವರಾರರಿತು?
ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ
ಒಂದಾತ್ಮ ತಾನ್ನೆನ್ನುವನುಭಾವಹೊಂದಿ
ಪಂಚಭೂತಗಳೊಡನೆ ಅದು-ತಾನು ಎಂದೆನುತ
ಬೇಹರಿಸಿ ಬೇಹಾರ ತೀರೆ ತಾ ನಂದಿ;
ತನುತನುವೊಳಷ್ಟಷ್ಟು ದೇಶವನು ತಾ ತುಂಬಿ
ಕರ್ಮಗಳಿನಷ್ಟಷ್ಟು ಕಾಲವನು ತುಂಬಿ
ಮಮತೆಯೊಳಗಷ್ಟಷ್ಟು ವಿಶ್ವಾತ್ಮವನು ತುಂಬಿ
ಅಹಮೆಂದು ನೊಂದು ನಲಿದಾನಂದ ತುಂಬಿ
ಸೃಷ್ಟಿ ಮೊದಲಿಂದುವರೆಗಾಗಿಹೋದವರೆಷ್ಟು!
ಆದವರು ಹೋದವರು ಆಗುವವರವರೇ.
ಅರ್ಥಕಾಮಗಳಿಡುವ ರತಿವಿರತಿ ಛಂದಕ್ಕೆ
ಭೂತರಂಗದಿ ಜೀವ ನರ್ತಿಸುವುದರರೇ!
(೨)
ಈ ಮಹಾನಾಟ್ಯವನು ಚೋದಿಸುವ ಚಾಲಕನು
ಈ ಚಿತ್ರಗತಿಗಾನವಿನ್ಯಾಸಿ ಯಾರು?
ಇಲ್ಲಿ ಕೊಂಕಲ್ಲಿ ಋಜು ಇಲ್ಲಿ ಕಟುವಲ್ಲಿ ಮೃದು
ಅಂತು ರಸ ಕೊನೆಗಮೃತ ವಿಂತೆಸೆಪನಾರು?
ಧರ್ಮವದು ಜೀವನದ ಮರ್ಮವದು ಚೇತನರ
ಸಮುದಾಯಮಂಗಳಕೆ ಅದರಂಕೆ ರಕ್ಷೆ
ದೇಹಾಂಗದರಿವೆಲ್ಲ ಜೀವಾಣುಗಿರುವಂತೆ
ಅರಿವರಿವೊಳಿಹುದಿದರ ಹೃನ್ನಿಷ್ಠ ನಕ್ಷೆ.
ಈ ನಕ್ಷೆಯಂತಾಗೆ ಅರ್ಥಕಾಮವಿಕಾಸ
ಎಂಥ ಶುಭದುದಯವಹುದೆಲ್ಲ ಜೀವರೊಳು!
ಧರ್ಮಾರ್ಥ ಕಾಮಗಳ ಈ ಪರಸ್ಪರವಶತೆ
ದುಸ್ಸಾಧ್ಯವೀಜಗದೊಳದಕೆ ಭವದಳಲು.
ಒಂದುಸಿರು ಹಲವೊಡಲು ಒಂದರಿವು ಹಲವು ಮನ
ಒಂದೆ ಆನಂದಕ್ಕೆ ಹಲಹಲವು ಹೃದಯ
ಇಲ್ಲಳಿಯಲಲ್ಲುಳಿದು ಇಲ್ಲಿ ಮುಳುಗಲ್ಲೆದ್ದು
ಅರ್ಥಕಾಮಗಳಂಕೆಗಿಡೆ ಧರ್ಮದುದಯ.
ಹಲವರಿದ ಧಿಕ್ಕರಿಸೆ ಕೆಲವರೊಳಗುಜ್ವಲಿಸಿ
ಭೋಗಿಯೋಡಿಸೆ ನಿಷ್ಠ ಯತಿಯನಾಶ್ರಯಿಸಿ
ಹಲರತೀಂದ್ರಿಯರಾಗೆ ಕೆಲಜಿತೇಂದ್ರಿಯರಲ್ಲಿ
ತೂಕ ತಪ್ಪಿದ ಜಗವ ಸಮತೂಕ ನಿಲಿಸಿ
ಅರಿವೊಳೆಲ್ಲೋ ನಿಂತು ಶಿವವ ಸಾಧಿಸುತಿಹುದು
ಲೇಸುಕೇಡಳಿವುಳಿವ ತಕ್ಕಂತೆ ಬಳಸಿ
ಆ ಧರ್ಮಭೃದ್ವರರ ನೆನಹನರಿವೊಳು ಧರಿಸಿ
ಶಂಕೆಯೆಲ್ಲವಕಳೆವ ಶಿವಕೆ ಬಗೆ ಬೆಳಸಿ.
*****
Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...