Home / ಕವನ / ಕವಿತೆ / ಹೊಲೆಯನು

ಹೊಲೆಯನು

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ||

ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ |
ಸತ್ಯನುಡಿಯನು ಮಾತನಾಡದವ ಹೊಲೆಯ ||
ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ |
ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ ||

ಹಡೆದ ತಾಯ್ತಂದೆಗಳ ಸೇವೆ ತಪ್ಪಿಪ ಹೊಲೆಯ |
ಪೊರೆದ ಯಜಮಾನಂಗೆ ತಿರುಗಿ ಬೀಳ್ವನೆ ಹೊಲೆಯ ||
ಮೊರೆಹೊಕ್ಕವನನ್ನು ಹೊರದೂಡುವವ ಹೊಲೆಯ |
ಹರಿಯಸ್ಮರಣೆಯ ಮಾಡವದ ಶುದ್ಧ ಹೊಲೆಯ || ೨ ||

ಗುರುವಿನೋಳ್ನಯ ಭಕ್ತಿ ತೋರದಾತನೆ ಹೊಲೆಯ |
ಪರರ ಮನವನು ಮದದಿನೋಯಿಪನು ಹೊಲೆಯ ||
ಪರಧನವ ಪರಸತಿಯ ಬಯಪ ಮಾನವ ಹೊಲೆಯ |
ಪರರ ಧರ್ಮವಹಳಿಪ ತಾಪರಮ ಹೊಲೆಯ || ೩ ||

ಮದ್ಯ ಮಾಂಸಾದಿಗಳ ಸೇವಿಪಾತನೆ ಹೊಲೆಯ |
ಕದ್ದು ವ್ಯೆಸನವಮಾಡಿ ಶುದ್ಧಯ ಮೆರೆವವ ಹೊಲೆಯ ||
ಇದ್ದುದನು ಸತ್ಕಾರ್‍ಯದಲಿ ಸವಿಸದಾತನೆ ಹೊಲೆಯ |
ಶುದ್ಧ ತನುಮನ ಮಾತನರಿಯದವ ಹೊಲೆಯ || ೪ ||

ತನ್ನಂತೆ ಪರರನು ಬಗೆಯದಾತನೆ ಹೊಲೆಯ |
ತನ್ನನಾಡಿನ ಹಿತಕೆ ಮಡಿಯದವ ಹೊಲೆಯ ||
ತನ್ನ ನಾಡ್ಸಂಸ್ಕೃತಿಯ ಮರೆವಾತನತಿ ಹೊಲೆಯ |
ತನ್ನವರ ದೂರುವವ ತಾ ಶುದ್ಧ ಹೊಲೆಯ || ೫ ||

ತನ್ನ ತಾನರಿಯದಲೆ ಮೆರೆವ ಮೂರ್‍ಖನು ಹೊಲೆಯ |
ತನ್ನವರವೊಲು ಪರರಬಗೆಯದವ ಹೊಲೆಯ ||
ಹೆಣ್ಣು ಹೊನ್ಮಣ್ಣುಗಳ ನೆನೆದುಗೋಳಿಪ ಹೊಲೆಯ |
ಧನ್ಯಪರಮೋಕ್ಷವನು ಬಯಸದವ ಹೊಲೆಯ || ೬ ||

ನಾಡನಾಯ್ಕರ ಮಾತಮೀರಿ ನಡೆವವ ಹೊಲೆಯ |
ನಾಡಿನಾಡಳಿತದೊಳಗ ಬರುವವ ಹೊಲೆಯ ||
ನಾಡಕೀರ್ತಿಗೆ ಕುಂದನೊಡ್ಡುವಾತನೆ ಹೊಲೆಯ |
ನಾಡನಾಡಲಿ ದ್ವೇಷ ಪಸರಿಪನು ಹೊಲೆಯ || ೭ ||

ನಾಡ ತಂದೆಯ ತತ್ವತಾನಡಿಸದವ ಹೊಲೆಯ |
ನಾಡಪಿತ ಮಹಾತ್ಮ ಗಾಂಧಿ ಕೊಂದವ ಹೊಲೆಯ ||
ನಾಡಿನೊಳ ಹಿಂಸೆಸತ್ಯ ಪಸರಿಸಲಾಗ |
ಗಾಡಿಯಿಂ ಮೆರೆದಪುದು ಹೊಲೆತನವನಳಿದೂ || ೮ ||
*****

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...