Home / ಕವನ / ಕವಿತೆ / ವಿಶ್ವ ಸಾಗರದೂರ್ಮಿಯಲಿ

ವಿಶ್ವ ಸಾಗರದೂರ್ಮಿಯಲಿ

೧
ವಿಶ್ವ ಸಾಗರದೂರ್ಮಿಯಲ್ಲಿ, ಬಾಳ ದೋಣಿಯಿದು
ನಶ್ವರದ ಶಾತ್ವತದಿ ತೇಲುತಿಹುದು
ವೀಚಿಗಳ ಹೊಡೆತದಲಿ, ನೆಗೆತದಲಿ ಬಿದ್ದೆದ್ದು,
ಶೂನ್ಯತೆಯ ಮೌನದಲಿ ಸಾಗುತಿಹುದು

೨
ಸಾಗರವ ಸುತ್ತಲೂ ಆಕಾಶದವಕಾಶ
ತಾಗಿ, ಸರಿಯಾಗಿ ಸುತ್ತಿರೆ, ಮುತ್ತಿರೆ,
ನಡುವಿನಲಿ ಮೂಡಿರುವ ಕಿರುದೋಣಿಯಿ೦ದೀಗ
ನಡುವುದು?–ದೂರ ಗುರಿಯಿರುವುದೇ?

೩
ತೀಡುತಿರೆ ತೀವ್ರ ಝಂಝಾವಾತ, ಸಾಗರವು
ಅಲ್ಲೋಲ-ಕಲ್ಲೋಲವಾಗಿರುವುದು
ರೌದ್ರ-ಭೀಕರ ವೀಚಿ ಮಾಲೆಗಳ ಮೇಲಾಟ
ರುದ್ರ ದೃಶ್ಯವನುಂಟು ಮಾಡಿರುವುದು

೪
ವಿಶ್ನ ಗರ್ಭವು ಬಿರಿದು, ಸಿಡಿದೊಡೆವ ತೆರ ಕಡಲು,
ಭೀಷಣಾದ್ಭುತವಾಗಿ ಭೋರ್ಗರೆವುದು
ಕಾಳರಾತ್ರಿಯ ಕೃಷ್ಣ ಲೀಲೆ ತಾಂಡವ ನೃತ್ಯ-
ವೆಸಗುವುದು-ಸೂತ್ತಲೂ ಶೂನ್ಯಶಾಂತಿ

೫
ಇಂತು ಈ ಪರಿಯಿ೦ದನಂತ ಭೀಕರವಾದ
ಸನ್ನಿವೇಶದಿ ಸುಳಿಯುತಿಹುದು ನೌಕೆ
ಭೀತಿ ರೀತಿಯನುಳಿದು, ಧೃತಿಯ ನೀತಿಯ ತಳೆದು;
ನಿಶ್ಚಲ ಪ್ರಗತಿಯಲಿ ಮುಂದರಿವುದು

೬
ಗುರಿಯು ನಿಶ್ಚಿತವಿಲ್ಲ;–ಸರಿಯುವುದ ಬಿಟ್ಟಿಲ್ಲ
ಆವ ತಾಣಕೆ ಗಮನವೆಂದರಿವರಾರು?
ಸಣ್ಣ ದೋಣಿಯಿದಿಂದದೃಶ್ಯ ಮಂಗಳಧಾಮ-
ಕೈದುವುದೆ?- ಸುಪ್ತ ಗರ್ಭಕ್ಕಿಳಿವುದೇ?
*****
೧೯೩೫

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...