
ಅಡವಿಮರದಡಿಯಲ್ಲಿ
ನನ್ನೊಡನೆ ಕೆಡೆದಲ್ಲಿ
ಇನಿಯ ಹಕ್ಕಿಯ ಕೊರಲ
ತನ್ನ ಕೊರಲಲಿ ತಂದು ನಲಿವನಾರೈ-
ಇತ್ತ ಬಾ, ಇತ್ತ ಬಾ, ಇತ್ತ ಬಾರೈ,
ಎತ್ತ ನೋಡಿಲ್ಲೆಲ್ಲ,
ಮತ್ತು ಹಗೆಯೊಂದಿಲ್ಲ,
ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.
ಆಸೆಬಲೆಯನು ತೊಲಗಿ,
ಬಿಸಿಲ ಕಾಯುತ ಮಲಗಿ,
ಉಣ್ಣುವೂಟವ ಕಂಡು,
ತಣ್ಣನೆಯೇ ತಣಿದುಂಡು ನಲಿವನಾರೈ-
ಇತ್ತ ಬಾ, ಇತ್ತ ಬಾ, ಇತ್ತ ಬಾರೈ,
ಎತ್ತ ನೋಡಿಲ್ಲೆಲ್ಲ,
ಮತ್ತೆ ಹಗೆಯೊಂದಿಲ್ಲ.
ಕೊರೆವ ಚಳಿ ಬಿರುಗಾಳಿಯಲ್ಲದಿಲ್ಲೈ.
*****
SHAKESPEARE : (1564-1616) : Under the Greenwood tree.















