ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ
ಶಂಗಡ ಗುಲಗಂಜೀ ಬಲಬಂದೂ ||೧||
ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ,
ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨||
“ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ
ಹನ್ನೆರಡೆ ವರುಶೀನ ತಲ ದಂಡೂ ||೩||
ಹನ್ನೆರಡು ವರುಶೀನ ತಲದಂಡ್ ಹೋಗಿ ಬರುತೇನೇ
ಅವಗೆ ಮಾಲಕ್ಷ್ಮೀ ಕೊಡತೇನೇ’ ||೪||
ಅಟ್ಟಂಬೂ ಮಾತಾ ಹೇಳಾನೆ ಲಣ್ಣಯ್ಯಾ
ತಂಗೀ ಮಾಲಕ್ಷ್ಮಿ | ಕರೂದಾನೇ ||೫||
“ಗೆಂಟ ಕಟ್ಟಲು ಬೇಡಾ ಪಟ್ಟೀ ಉಡಲುಬೇಡಾ
ಕಲ್ಲೂ ಮಾಳುಗೀಯಾ ಇಳಿಬೇಡಾ || ತಂಗಮ್ಮಾ ||೬||
ಹನ್ನರಡ್ ವರುಶೀನಾ ತಲದಂಡೂ
ಹನ್ನೆರಡ್ ವರುಶೀನಾ ತಲದಂಡ್ಗ್ ಹೋಗಿ ಬರುತೇ” ||೭||
ಅಟ್ಟಂಬೂ ಮಾತಾ ಕೇಳಾನ ಸಲೂಜಾಣಾ
ಕೊಟ್ಟೂಗೀ ಕದವಾ ಜಡೂದಾನೇ || ಸಲೂಜಾಣ ||೮||
ಐದ್‌ಕಂಡ್ಗ ಹೊಲಕೇ ಹೊಡೂದಾನೇ
“ಅದುವೇನೇ ಮಾಲಕ್ಷ್ಮೀ, ಇದುವೇನೇ ಮಾಲಕ್ಷ್ಮೀ ||೯||
ಹೋಕ್ಕಾಲದ ನಿದ್ರೀ ನಿನಗೇನೇ
ಹೋಕ್ಕಾಲದಾ ನಿದ್ರಿ ನಿನಗೇನೇ ಮಾಲಕ್ಷ್ಮೀ ||೧೦||
ಐದ್‌ಕಂಡ್ಗ್ ಹೊಲವಾ ಕಾಯವೇನೇ?”
ಅಟ್ಟಂಬೂ ಮಾತಾ ಕೇಳಾಳ ಮಾಲಕ್ಷ್ಮೀ
ಬಣ್ಣಾದಾ ದಾಬಾ ಬಲಗೈಲೀ ||೧೧|
ಬಣ್ಣದಾ ದಾಬಾ ಬಲಗೈಲೀ ಲಿಡಕಂಡೀ
ಕಲ್ಲೂ ಮಾಳಿಗಿಯಾ ಇಳದಾಳೇ ||೧೨||
ಕಲ್ಲಾಲೂ ಮಾಳುಗೀ ಇಳದಾಳೇ ಮಾಲಕ್ಷ್ಮೀ
ಐದ ಕಂಡಗ ಹೊಲಕೇ ನೆಡುದಾಳೇ ||೧೩||
ಲಿಂಬಿ ಮರದಡಿಗೇ ನಿತ್ತಿರುವ ಸುಲೂಜಾಣಾ
“ಹಾಂಗ್ ಹೋಗಾ ಕದವಾ ತಿರಗಯ್ಯಾ” ||೧೪||
“ಅತ್ತೀಯಾ ಮಗನಲ್ಲ ಮತ್ತು ಸೋದರವಲ್ಲಾ
ಹಾಂಗ್ ಹೋಗಾ ಕರವಾ ತಿರಗಯ್ಯ” ||೧೫||
“ಅತ್ತೀಯಾ ಮಗಾ ಹೌದು ಮತ್ತೂ ಸೋದರ ಹೌದು
ಹಾಂಗ್ ಹೋಗಾ ಕರವಾ ತಿರಗಯ್ಯಾ” ||೧೬||
ಅಟ್ಟಂಬೂ ಮಾತಾ ಕೇಳಾನೆ ಸುಲೂಜಾಣಾ
ಕೊಟ್ಟೂಗೀಗ ಕರವಾ ಜಡದಾನೇ ||೧೭||
ಕೊಟ್ಟೂಗೀಗೇ ಕರವಾ ಜಡದಾನೆ ಸುಲೂಜಾಣಾ
ಬೆಳ್ಳೀ ದಾಬುನಲ್ಲಿ ಬಿಗುದಾನೇ ಸುಲೂಜಾಣಾ ||೧೮||
ಕಲ್ಲೂ ಮಾಳುಗಿಗೇ ನೆಡದಾನೆ
ಕಲ್ಲಲೂ ಮಾಳುಗಿಗೇ ನೆಡದಾನೆ ಸುಲೂಜಾಣಾ
ಅಲ್ಲೀ ಉಂಡಿದುರೂ ವಡನೂಟಾ ||೧೯||
ಅಟ್ಟಂಬೂ ಮಾತಾ ಕೇಳಾವ್ನೆ ಲಣ್ಣಯ್ಯ
ಹನ್ನೆರಡ ವರುಶೀನಾ ತಲದಂಡೂ ||೨೦||
ಹನ್ನೆರಡೂ ವರುಶೀನಾ ತಲದಂಡೂ ಹಿಂದಾಲೆ ಬಂದೀ
ತಂಗೀಯಾ ಕರದೇ ನುಡೀದಾನೆ ||೨೧||
“ಮೊಕವೇಕೇ ಬಾಡೀತೇ? ನೆರಿಯಾಕೇ ಕುಂದೀತೇ?
ಸೀರಿ ನೆರಿಮುಡಿಯೂ ಸಡಲೀತೇ? ||೨೨||
ಸೀರೀಯೂ ನೆರಿಮುಡಿ ಸಡಲಾಯ್ತು ತಂಗಮ್ಮಾ
ಗೋವೇ ಜಂಗಮ್ಮಾಗೊಲಿದ್ಯೇನೇ ||೨೩||
ಹಂಡನೂ ಹಾದೀತೂ ಹುಂಡಿನೂ ಲೊದ್ದೀತೂ
ಶಣ್ಣಾಕೂಡಿನ್ಯೇಮ್ಮೇ ಶಳುದೀತೂ” ||೨೪||
“ಶಣ್ಣಲೂ ಕೋಡೀನ್ಯೆಮ್ಮೇ ಶಳುದೀತೂ ಲಣ್ಣಯ್ಯ
ಸೀರೀ ನೆರಿಮುಡಿಯೂ ಸಡಲಾಯೂ” ||೨೫||
ಅಟ್ಟಂಬೂ ಮಾತಾ ಕೇಳಾನೆ ಲಣ್ಣಯ್ಯ
ಅರವತ್ತೂ ಗೆಣ್ಣೀನಾ ಹರಕೋಲಾ | ಹರಕೋಲಾ ತಡಕಂಡೀ
ಅರೂಮುರುಪೆಟ್ಟಾ ಹೂಡದಾನೀ ||೨೬||
“ನನಗೇಕೇ ಹೊಡುತೀಯೊ? ನನಗೇಕೇ ಬಯ್ದೀಯೋ
ನನ್ನಾ ಕೋಡ್ಯೇಕೇ ಕೊಯ್ದಿಯೋ? ||೨೭||
ನನ್ನಾಲೂ ಕೋಡ್ಯಾಕೆ ಕೊಯ್ದಿಯೋ ಲಣ್ಣಯ್ಯಾ,
ಗೋವೀ ಜಂಗಮ್ಮಾಗೊಲೀದಾಳೇ” ||೨೮||
ಅಟ್ಟಂಬೂ ಮಾತಾ ಕೇಳಾನೇ ಲಣ್ಣಯ್ಯಾ
ತಮ ಬಾವಾನಾ ಕರದಾನೇ ||೨೯||
“ಹಾದಿಗೆ ಹಂದರ ನೀಡೂ ಬೀದಿಗೆ ಚಪ್ಪರ ನೀಡು
ಮದವೇ ಸಂಗ್ರಮ್ಮಾ ಕನಕೊಳ್ರೋ ||೩೦||
ಮದವೀಯಾ ಸಂಗ್ರಮ್ಮಾ ಕನಕೊಳೋ” ಲಂದ ಹೇಳೀ
ಕಾಸೀ ದೇಸಾಂತ್ರೇ ನೆಡುದಾನೇ ||೩೧||
*****
ಕೆಲವು ಪದಗಳ ವಿವರಣೆ:
ಜಡುದಾನೆ = ಜಡಿದನು, ಶಬ್ದವಾಗುವಂತೆ ಬಾಗಿಲು ಹಾಕಿದನು
ಹೊಕ್ಕಾಲ = ಹೋಗುವ ಕಾಲ, ಹಾಳಾಗುವ ಕಾಲ
ನೆರಿ = ಸೀರೆಯ ನಿರಿ
ಶಳುದೀತು = ಸೆಳೆಯಿತು
ಗೆಣಲ್ಲಿ = ಗಂಟು
ಸಂಗ್ರಮ್ಮ = ಸಂಗ್ರಹ
ಅವಶ್ಯ ಸಿದ್ಧತೆ ಅನಕೊಳ್ಳೊ = ಅನುವಾಗು
ದಾಬು = ಪಶುವನ್ನು ಕಟ್ಟುವ ಹಗ್ಗ
ಹೇಳಿದವರು: ಮಾದೇವಿ ನಾರಾಯಣ ನಾಯ್ಕ, ಗೇರಸೊಪ್ಪೆ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















