ಸ್ವಾಮಿ ವಿವೇಕಾನಂದರು ಚಿಕಾಗೋ ನಗರದಲ್ಲಿದ್ದರು. ಒಮ್ಮೆ ಸಭೆಯಲ್ಲಿ ಒಬ್ಬ ಎದ್ದು ನಿಂತು- “ನಮ್ಮ ಸಂಸ್ಕೃತಿ ಮೊದಲೋ? ವಿಶ್ವದ ದೇವರುಗಳು ಮೊದಲೋ?” ಎಂದು ಪ್ರಶ್ನಿಸಿರ್ದ.
ಇಡೀ ಸಭೆಯೇ ನಿಶ್ಯಬ್ದವಾಯಿತು. ಅಲ್ಲಿದ್ದವರೆಲ್ಲ ಸ್ವಾಮಿ ವಿವೇಕಾನಂದರನ್ನು ಕುತೂಹಲದಿಂದ ನೋಡುತ್ತಾ ಕುಳಿತರು.
ಸ್ವಾಮಿ ವಿವೇಕಾನಂದರು- “ನನಗಿಂದು ಭಲೇ ಖುಷಿಯಾಗುತ್ತಿದೆ. ನನ್ನ ನೂರಾರು ಭಾಷಣ ಇಲ್ಲಿ ಚಿಕಾಗೋ ನಗರದಲ್ಲಿ ಪ್ರಭಾವ ಬೀರಿದೆಯೆನಿಸುವುದು ಬಹಳ ಒಳ್ಳೆಯ ಪ್ರಶ್ನೆಯನ್ನೇ ನೀವು ಕೇಳಿರುವಿರಿ. ಇದೊಂದು ಬೀಜವೃಕ್ಷದ ನ್ಯಾಯವಿದ್ದಂತೇ… ಮರ ಮೊದಲೋ? ಬೀಜ ಮೊದಲೋ? ಎಂಬ ಗಂಭೀರವಾದ ವಾದ ವಿವಾದ! ಸಂಸ್ಕೃತಿ ದೇವರು ಏಕಕಾಲದಲ್ಲಿ ಅಸ್ಥಿತ್ವಕ್ಕೆ ಬಂದಿವೆ. ಮನುಷ್ಯ ದೇವರನ್ನು ಸೃಷ್ಠಿಸಿದ ಎನ್ನುವ ವಾದ ಉದ್ಧಂಡತನವಾದ. ದೇವರು ಮೊದಲು, ನಂತರ ಮನುಷ್ಯ, ಈವತ್ತು ಮನುಷ್ಯ ಇತರೆ ಮನುಷ್ಯರನ್ನು ಅರ್ಥ ಮಾಡಿಕೊಂಡಿಲ್ಲ. ತನ್ನನ್ನು ತಾನು ಅರಿತಿಲ್ಲ. ಇನ್ನು ಗೌರವ ಕೊಡುವುದಿಲ್ಲ ಇವರೆಲ್ಲ ಮನುಷ್ಯರಲ್ಲ, ರಕ್ಕಸರು, ರಾವಣರು, ಸೈತಾನರು, ದೇವರು ಮನುಷ್ಯರೊಳಗಿರುವುದರಿಂದ ಒಬ್ಬರಿಗೆ ಒಬ್ಬರು ಪರಸ್ಪರ ಗೌರವ ಕೊಡುವ ತೆಗೆದುಕೊಳ್ಳುವುದನ್ನು ಮೊದಲು ಕಲಿತುಕೊಳ್ಳಬೇಕು! ಆಗಲೇ ದೇವರ ಮೇಲೆ ನಂಬಿಕೆ, ಭಕ್ತಿ, ಗೌರವ, ಮೂಡುವುದು.
ದೇವರ ಅಸ್ತಿತ್ವವಿರುವುದರಿಂದಲೆ ಎಲ್ಲರೂ ಭಯ, ಭಕ್ತಿ, ನೆಮ್ಮದಿಯಿಂದ ಜೀವನ ಮಾಡುತ್ತಿರುವುದು. ಇಲ್ಲಿ ನಮ್ಮಲ್ಲಿ ನೆಮ್ಮದಿಗೆ, ಸುಖ, ಸಂತೋಷಕ್ಕೆ, ಸಾವಿರಾರು ಮಾರ್‍ಗಗಳಿವೆ. ಏಕೆಂದರೆ… ದೇವರಿದ್ದಾನೆಂಬ ಒಂದೇ ಒಂದು ಕಾರಣಕ್ಕೇ… ಸಿದ್ಧಾಂತ, ತತ್ವ, ನಂಬಿಕೆ, ರಚನೆಯ ಆಧಾರದ ಮೇಲೆ ಸಂಸ್ಕೃತಿ- ದೇವರ ಅಸ್ಥಿತ್ವ ಕೂಡಾ… ನಿರ್‍ಧಾರವಾಗುವುದು” ಎಂದು ವಿವರಿಸುತ್ತಾ ನಿಂತರು.
ಅಲ್ಲಿದ್ದವರೇನು… ಪ್ರಶ್ನೆ ಕೇಳಿದ ವ್ಯಕ್ತಿ ಕೂಡಾ ಸ್ವಾಮಿ ವಿವೇಕಾನಂದರ ಪ್ರತಿಭೆ, ವಿದ್ವತ್ತು, ಕಂಚಿನಂಥಾ ಕಂಠಶ್ರೀಗೆ ನಿಬ್ಬೆರಗುಗೊಂಡನಲ್ಲದೆ, “ಸ್ವಾಮಿಗಳೆ… ಇಂದು ನಮ್ಮ ಕಣ್ಣು ತೆರೆಸಿದ್ದೀರಿ. ನಿಮ್ಮ ದೇವರು ನಮಗೆ ಗಾಡ್ ಆಗುವುದು. ನಮ್ಮ ವರ್ಷಿಪ್, ಫೇತ್, ಇಕ್ವಾಲಿಟಿ, ಬಿಲೀಫ್, ರೈಸ್… ನಿಮಗೆ ಅನ್ನ ದೇವರು- ಪೂಜೆ ವಿಶ್ವಾಸ, ಸಮಾನತೆ, ನಂಬಿಕೆ… ಇತ್ಯಾದಿ ರೂಪದಲ್ಲಿ ಕಾಣುವುದು!” ಎಂದು ಒಪ್ಪಿಕೊಂಡನಲ್ಲದೆ, ಸ್ವಾಮಿಗಳಿಗೆ ಅಡ್ಡಬಿದ್ದು ಹೊರಟ.
ಅಲ್ಲಿಗೆ ಅಂದಿನ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸ್ವಾಮಿ ವಿವೇಕಾನಂದರಿಗೆ ಏನೋ ಸಾಧಿಸಿದ ತೃಪ್ತಿ, ಆನಂದ ಲಭಿಸಿತು. ತಿಳಿಯದಲೇ… ಜನರತ್ತ ಕೈಬೀಸಿ ಸಂಭ್ರಮಿಸಿದರು.
*****


















