ದಿನಾಂಕ ೩೧-೦೭-೨೦೧೫ ರಂದು ಉಳ್ಳಾಗಡ್ಡಿ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸದ್ದುಗದ್ದಲ ಜೋರಾಗಿಯೇ ಮಾಡುತ್ತಿದೆ ! ದಿನದಿಂದ ದಿನಕ್ಕೆ ಉಳ್ಳಾಗಡ್ಡಿ ದರ ರಾಕೇಟ್ ವೇಗದಲ್ಲಿ ಆಕಾಶದತ್ತ ಹಾರುತ್ತಿದೆ. ಕೇಜಿ ಒಂದಕ್ಕೆ ೬೦ ರಿಂದ ೭೦ ಅಂದರೂ ಮಾರುಕಟ್ಟೆಯಲ್ಲಿ ದಾಸ್ತಾನು-ಸರಬರಾಜು ಇಲ್ಲವೇ ಇಲ್ಲ.

ಕೆಂಪು ಉಳ್ಳಾಗಡ್ಡಿ- ಔಷಧಿ ಉಳ್ಳಾಗಡ್ಡಿಯಿದು. ಇದಂತೂ ಮಾರುಕಟ್ಟೆಯಲ್ಲಿ ದುರ್ಬೀನ್ ಹಾಕಿ ಹುಡುಕಿದರೂ ದಾಸ್ತಾನು ಇಲ್ಲ ! ಒಂದು ನೂರು ರೂಪಾಯಿ ಎಂದರೂ ಉಳ್ಳಾಗಡ್ಡಿ ಲಭ್ಯವಿಲ್ಲ !

ಈ ಉಳ್ಳಾಗಡ್ಡಿಯಲ್ಲಿ ಅಲ್ಲಿಲ್ ಪ್ರೊಪೈಲ್ ಡಿಸ್‌ಅಲೈಡ್, ಅಲಿಸಿನ್ ಎಂಬ ಔಷಧಿಯುಕ್ತ ರಾಸಾಯನಿಕಗಳಿವೆ. ಇವು ಮಧುಮೇಹಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತವೆ. ಅಜೀರ್ಣತೆಯನ್ನು ಹೊಗಲಾಡಿಸುವುದು.

ಉಳ್ಳಾಗಡ್ಡಿಯನ್ನು ನಿತ್ಯ ಮೂರು ಹೊತ್ತು ಊಟ-ತಿಂಡಿಯೊಂದಿಗೆ ನಿಯತವಾಗಿ ಸೇವಿಸುವುದರಿಂದ ತೂಕ ಕಡಿಮೆಯಾಗುವುದು. ಬೊಜ್ಜು ನಿವಾರಣೆಯಾಗುವುದು. ಬಾಯಾರಿಕೆ ನೀಗುವುದು.

ತುರಿಕೆ ಬಂದ ಕಡೆಗೆಲ್ಲ- ಚೇಳು ಇತರೆ ವಿಷಯುಕ್ತ ಕ್ರಿಮಿಕೀಟಗಳು ಕಡಿದಲ್ಲಿ ಕಡಿದ ಜಾಗೆಗೆ ಉಳ್ಳಾಗಡ್ಡಿ ರಸದಿಂದ ತಿಕ್ಕಿದರೆ ಉಪಶಮನವಾಗುವುದು.

ಉಳ್ಳಾಗಡ್ಡಿಯನ್ನು ಬೇಸಿಗೆ ಮಳೆಗಾಲದ ಬೆಳೆಯಾಗಿ ಬೆಳೆಯುವರು. ಉಳ್ಳಾಗಡ್ಡಿಯಿಲ್ಲದೆ ತಿಂಡಿತೀರ್ಥ ಊಟ ಕೂಡಾ ರುಚಿಸದು. ಇದನ್ನು ಮಸಾಲೆಯಂತೆ ಬಳಸುವರು. ಮನುಷ್ಯನ ಆರೋಗ್ಯಕ್ಕೆ ಇದು ಹೇಗೆ ಉಪಯುಕ್ತವೋ ಹಾಗೆ ಪ್ರಾಣಿಗಳ ಆರೋಗ್ಯಕ್ಕೆ ಬೇಕೆಬೇಕು.
*****