ಇತ್ತೀಚೆಗೆ ಮನುಷ್ಯನಲ್ಲಿ ಉಂಟಾಗುವ ಅಂಗ ವೈಕಲ್ಯತೆಗಳ ಬಗೆಗೆ ಹಲವು ಶೋಧನೆಗಳು ನಡೆದಿದ್ದು ಕೆಲವು ಸತ್ಯಗಳು ಈ ರೀತಿ ಹೊರಬಿದ್ದಿವೆ.
೧. ಹೆಣ್ಣಿನ ಅಂಡಾಣುವು ಗಂಡಿನ ರೇತುಕಣವು ಹೊರಬಿದ್ದ ಮೇಲೆ ಹೊತ್ತುಕಳೆದಂತೆಲ್ಲ ಅವುಗಳ ಚೈತನ್ಯ ಕುಂದುತ್ತ ಬರುತ್ತದೆ. ಸಾಕಷ್ಟು ಚೈತನ್ಯವಿಲ್ಲದಂತಹ ಇಂಥವು ಒಂದುಗೂಡಿದರೆ ಹುಟ್ಟುವ ಪಿಂಡ ಸರಿಯಾಗಿ ಬೆಳೆಯದೇ ದುರ್ಬಲವಾಗುವದು ಇಲ್ಲವೇ ವಿಕಲಾಂಗವಾಗುವದು.
೨. ಗರ್‍ಭವತಿಯು ಔಷಧಿಯ ಪೂರ್‍ವಾಪರ ತಿಳಿಯದೇ ಸೇವಿಸುವದರಿಂದ ವಿಕಲಾಂಗ ಶಿಶುವಿಗೆ ಜನ್ಮಕೊಡುವ ಸಂಬಂಧಗಳು ಹೆಚ್ಚು.
೩. ಗರ್‍ಭಿಣಿ ಸ್ತ್ರೀಯ ಒಳಾಂಗಣವನ್ನು ಪರೀಕ್ಷಿಸುವ ಸಲುವಾಗಿ ಕ್ಷ-ಕಿರಣ ಸಹಾಯದಿಂದ ಛಾಯಾಚಿತ್ರ ತೆಗೆಯಬೇಕಾಗಬಹುದು. ಬೆಳೆಯುವ ಭ್ರೂಣದ ಮೇಲೆ ಈ ಕ್ಷ- ಕಿರಣಗಳು ಕೆಲವು ಸಲ ದುಷ್ಪರಿಣಾಮ ಬೀರಿ ವಿಕಲತೆನ್ನುಂಟು ಮಾಡಬಹುದು.
೪. ಗರ್‍ಭಧಾರಣೆಯ ಸಮಯದಲ್ಲಿ ಈ ವರ್ಣ ತಂತುಗಳ ಸಮ್ಮಿಲನ ಅಸ್ವಾಭಾವಿಕ ರೀತಿಯಲ್ಲಿ ಉಂಟಾದರೆ ಅಥವಾ ಪ್ರಕೃತಿಗೆ ವಿರುದ್ದವಾದ ಕ್ರಮದಲ್ಲಿ ಉಂಟಾದರೆ ವಿಕಲಾಂಗ ಶಿಶುಗಳು ಜನಿಸುವುದೆಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.
೫. ವಿವಿಧ ಅಂಟುರೋಗಗಳಿಂದ ನರಳುತ್ತಿರುವ ಸ್ತ್ರೀಯು ವಿಕಲಾಂಗ ಶಿಶುಗಳಿಗೆ ಜನ್ಮ ನೀಡುವ ಸಂಭವವಿದೆ. ಗರ್ಭಿಣಿಸ್ತ್ರೀಯು ಕೋಪಿಷ್ಟೆಯಾದರೆ ಅವಳ ಮಾನಸಿಕ ಒತ್ತಡ ಹಾಗೂ ರಕ್ತದ ಒತ್ತಡಗಳು ಜನಿಸುವ ಶಿಶುವಿನ ಮೇಲೆ ಭೀಕರ ಪರಿಣಾಮ ಬೀರಬಲ್ಲವು. ಸ್ತ್ರೀಯು ನಿರ್ನಾಳ ಗ್ರಂಥೀಗಳಲ್ಲಿ ಪ್ರಮುಖವಾದ ಪಿಟ್ಯುಟರಿ ಗ್ರಂಥಿಯ ಸ್ರಾವದಲ್ಲಿನ ಹೆಚ್ಚಳ ಅಥವಾ ಇಳುವರಿಯಿಂದಾಗಿ ಉದ್ದನೆಯ ಅಥವಾ ತೆಳ್ಳನೆಯ ಶಿಶುವಿಗೆ ಜನ್ಮನೀಡಬಹುದು.
೬. ಕೂಡಿದ ಅಂಡಾಣುಗಳು (ಯುಗ್ಮ ಜೀವಕಣಗಳು) ಬೇರೆ ಬೇರೆಯಾಗಿದ್ದರೆ ಅವು ಅವಳಿ ಜವಳಿಯಾಗುತ್ತವೆ.
೭. ಅನೇಕ ಬಾರಿ ಗರ್ಭದಲ್ಲಿ ಕೂಡಿದ ಯುಗ್ಮಜೀವಕಣಗಳು ಕೋಶ ವಿಭಜನೆಯ ವಿವಿಧ ಹಂತಗಳಲ್ಲಿ ಬೇರ್ಪಡದೆ ಜೊತೆಗೂಡಿ ಇರುತ್ತವೆ. ಇದರಿಂದ ಹುಟ್ಟುವ ಶಿಶುಗಳಲ್ಲಿ ಸಾಮಾನ್ಯವಾಗಿ ತಲೆ, ಹೊಟ್ಟೆ, ಬೆನ್ನು ಮುಂತಾದ ಅಂಗಗಳು ಒಂದುಗೂಡುವ ಸಂಭವವಿದೆ.
೮. ಕಡುಬಡ ಜನರು ಆರೋಗ್ಯವಿಲ್ಲದೇ, ಜೀವಸತ್ವಗಳ ಆಹಾರಗಳ ಕೊರತೆ ಇದ್ದವರು ಪೌಷ್ಟಕಾಂಶಗಳ ಕೊರತೆ ಇದ್ದವರೂ ಜೀವ ಧಾತುಗಳ ಕೊರತೆ ಇದ್ದವರು ಇಂದಿನ ವಿಷಕಾರ ಮದ್ದುಗಳ ಗೊತ್ತು ಗುರಿ ಇಲ್ಲದ ಸೇವನೆ ಮಾಡುವ ಗಂಡ ಹೆಂಡಿರಿಂದ ಹುಟ್ಟುವ ಮಕ್ಕಳು ವಿಕಲಾಂಗವಾಗುತ್ತವೆ.
೯. ಇಂಥಹ ವೈಕಲ್ಯತೆಗಳಿಗೆ ಪ್ರಮುಖ ಕಾರಣಗಳನ್ನೂ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅನುವಂಶೀಯ ಮತ್ತು ಪರಿಸರದ ಪರಿಣಾಮಗಳು, ಕೆಲವು ವೈಕಲ್ಯತೆಗಳು ತಂದೆ, ಅಥವಾ ತಾಯಿಯಿಂದ ಕಾರಣವಾಗಿರಬಹುದು. ಮಗುವು ಕೈ ಬೆರಳು ಇಲ್ಲವೇ ಕಾಲುಬೆರಳಗಳನ್ನು ಮಾಮೂಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿರುವುದು ಸಂತತಿಯಿಂದ ಸಂತತಿಗೆ ಸಾಗಣೆಯಾಗಬಹುದು.
೧೦. ಅಂಗವೈಕಲ್ಯತೆಗೆ ಇನ್ನೊಂದು ಕಾರಣ ಸುತ್ತಲಿನ ಪರಿಸರ ಪರಮಾಣು ವಿಕಿರಣಗಳ ಪರಿಣಾಮಗಳು ಭ್ರೂಣದ ಮೇಲೆ ಬಹಳ ಪ್ರಭಾವ ಬೀರುವವು. ಅಂಥಹ ಪ್ರಭಾವವನ್ನು ಈಗಲೂ ನಾವು ಜಪಾನ್‌ನಲ್ಲಿ ಕಾಣಬಹುದು. ಮನುಷ್ಯ ಇಂದು ಕೃತಕವಾಗಿ ನಿರ್ಮಿಸುತ್ತಿರುವ ವಿಕಿರಣ ಕ್ರಿಯಾಶಕ್ತಿಯು ಸುತ್ತಲಿನ ಪರಿಸರವನ್ನು ಮಲೀನಗೊಳಿಸಿ ಭ್ರೂಣಗಳ ವಿಕಸನದ ಮೇಲೆ ದುಷ್ಪರಿಣಾಮ ಬೀರುತ್ತವೆ.
*****