ಇವಳು ಬಂದಾಗ ಇವಳ ನಡೆಯೊಡನೆ ನಾನೋಡಲಾರೆ
ಇವಳ ಭಂಗಿಗಳ ನಾನಂಗವಿಸಲಾರೆ
ಇವಳ ಮೌನ ಸಲ್ಲಾಪವ ನಾನಾಲಾಪಿಸಲಾರೆ
ಇವಳ ವೇಷದೊಡನೆ ನಾನಾವೇಶಗೊಳ್ಳಲಾರೆ
ಇವಳ ಗತಿಯೊಡನೆ ನಾ ನರ್ತಿಸಲಾರೆ
ಇವಳ ಸಂಕೇತಗಳ ನಾ ಸಂಭಾವಿಸಲಾರೆ
ಇವಳ ಮೋದವ ನಾ ಸಾಧಿಸಲಾರೆ
ಇವಳ ಪಾತ್ರವ ನಾನ ಪರಿಣಾಮಿಸಲಾರೆ
ಇವಳ ಶಕ್ತಿಯ ನಾನಭಿವ್ಯಕ್ತಿಸಲಾರೆ

ಆದರೆ ಚಣದಲ್ಲಿ ಕಣವಾಗಿ
ಇವಳಿಗೆ ನಾನು ಸಂಪೂರ್ಣ ಸೋತಾಗ
ಏನೋ ಗೆದ್ದ ಅನುಭವ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)