ಲಾಲಿ ಲಾಲೀ ಲಾಲಿ ಲಾಲೀ
ವಾರಿ ಜೊಲ್ಲಿನ ಚಲುವಗೆ ||

ಎಲ್ಲಿ ನರಳಿಕೆ ಎಲ್ಲಿ ಬಳಲಿಕೆ
ಅಲ್ಲಿ ಆಡುವ ಕಂದ ನೀ
ಎಲ್ಲಿ ಹಸಿವೆಯ ಬೆಂದ ಬೆಳುವಲ
ಅಲ್ಲಿ ಬೆಳೆಯುವ ಗೆಳೆಯ ನೀ

ಜೋಗ ತಡಸಲ ನಿನಗೆ ಗುಡಿಸಲ
ತೀರ್ಥ ಪಾನಂ ಗೈಯುವೆ
ದಲಿತ ಎದೆಗಳ ತುಳಿತ ತನುಗಳ
ಕಣ್ಣ ನೀರಂ ಎರೆಯುವೆ

ಮುರಿದ ಎಲುಬಿಂ ಸುರಿದ ಕೊಯಲಿಂ
ಕಲ್ಪಿದೆಡೆಯನು ನೀಡುವ
ಬೆಟ್ಟ ಬೆಟ್ಟದ ಹಕ್ಕಿ ಪಕ್ಕದ –
ಗಾನ ಕೊಡೆಯಂ ಹಿಡಿಯುವೆ
*****