Home / ಕವನ / ಕೋಲಾಟ / ತಾನಾನಾ ತಂದ್ರನಾನಾ

ತಾನಾನಾ ತಂದ್ರನಾನಾ

(ಕೆರ್‌ಯಾ ಯೇರಿಯ ಮೇನೇ)

ಕೆರ್‌ಯಾ ಯೇರಿಯ ಮೇನೇ ಕೆರ್‌ಯಾಯೇರಿಯ ಮೇನೇ
ಜಡ್ಯಾ ಕೊಂಬಿನ ಬಸವ ಹಾದಾಡಿ ಮೆಂದಾ ಹೊಡಿ ಹುಲ್ಲಾ || ೧ ||

ಹಾದಾಡಿ ಮೆಂದಾ ಹೊಡಿ ಹುಲ್ಲು ಬಸುವಪ್ಪ
ಕಡುಜೀಲ ಬನುಕೇ ನಡದೀದ || ೨ ||

ಕಡುಜೀಲ ಬನುದಲ್ಲಿ ಕಡುಜಾಣರ ಕಾವೀಲ
ಅಂಬೂ ಬಿಲ್ಲಿಟ್ಟೂ ಹೊಡದಾರೇ ತಾನಽ || ೩ ||

ಅಂಬೂ ಬಿಲ್ಲಿಟ್ಟೂ ಹೊಡಿದವ್ರೆ ಬಸುವಪ್ಪ
ಸಬಾ ಬಿದ್ದಿ ಭೂಮಿ ಮೇನೇ || ೪ ||

ಕಾಯಾ ಹೋಗಿತ ಸ್ವಾಮಿ ಬಳಿಗೇ | ಬಳೀಗೆ ಹೋಗುತನ
ಸ್ವಾಮ್ಯವ್ರು ದೇವಾರ ಪೂಜೆಗೆ ನಿಂತೀರೋ ತಾನಾನ || ೫ ||

‘ಯೇನು ಬಂದೆ ಬಸುವಪ್ಪ? ಯೆಂತು ಬಂದೆ ಬಸುವಪ್ಪ
ಬಂದಾ ಕಾರಣ ನನುಗೇಳು’ ತಾನಾನಾ || ೬ ||

‘ಯೇನು ಅಲ್ಲ ಯೇಲು ಸ್ವಾಮಿ, ಯೆಂತು ಅಲ್ಲ ಯೇಲು ಸ್ವಾಮೀ
ನರುಲೋಕ ನಾನೂ ನಲುಗ್ಲಾರೇ’ ತಾನಾನಾ || ೭ ||

‘ಜಡ್ಯಾಕೊಂಬಿನ ಬಸವ ಕೆರ್‌ಯಾಯೇರಿಯ ಮೇನೇ
ಹಾರಾಡಿ ಮೆಂದೇ ಹೂಡಿಹುಲ್ಲಾ ತಾನಾನಾ | ಹೂಡಿಹುಲ್ಲ ಯೇಲು ಸ್ವಾಮಿ’
ಕಡುಜೀಲ ಬನುಕೇ ನಡುದೀನೇ || ೮ ||

ಕಡುಜೀಲ ಬನುದಲ್ಲಿ ಕಡುಜಾಣರು ಕಾವೀಲ
ಅಂಬೂ ಬಿಲ್ಲಟ್ಟೀ ಹೊಡುದಾರೂ || ೯ ||

ಅಂಬೂ ಬಿಲ್ಲಿಟ್ಟಿ ಹೋಡುದಾರೂ
‘ಅಂಬೂ ಬಿಲ್ಲಿಟ್ಟೇ ಹೋಡುದಾರು ಯೆಲುಸ್ವಾಮೀ
ನನ ಸಬಾ ಬಿದ್ದಿತು ಭೂಮಿ ಮೇನೇ || ೧೦ ||

ಕಾಯಾ ಬಂದಿದೆ ಸ್ವಾಮಿ ಬಳಿಗೆ ಯೆಲು ಸ್ವಾಮೀ’
‘ನಿನ್ನ ಮಾತೀಗ್ ನಾ ಮರುಳಾದನಲ್ಲ ಗರೂಡಾ
ವಳ್ಳೇ ದೇವರ ಕೋಲೂ ಉಳಿವನ ಕೋಲು ಕೋಲೂ’ || ೧೧ ||

‘ಬಚವನಾ ಬಚವನ್ನಿರೇ ಬಚವನಾ ಪಾದಕೆ ಚರಣನ್ನಿರೇ
ಮೇಲೆ ಮುತ್ತಿನ ಚತ್ತುಗೇ ಅದು ನಮ್ಮ ಕಲ್ಲಾ ಪಾಂಡವರಾ ಬಚುವಾ || ೧೨ ||

ನರಲೋ ಕ ನಾನೂ ಸಲ್ಗನಾರೇ ತಾನಾನಾ’ | ಎಂದೇಳಿ
ಬಸಪ್ಪ ಬಿದ್ದಿ ಬಿದ್ದಿ ಹೊರುಳ್ತಾನೋ || ೧೩ ||

ಯೆಟ್ಟೊಂದು ಮಾತಾ ಹೇಳೀರು ಸ್ವಾಮ್ಯವ್ರು
ಬಸಪ್ಪ ಯೆಬ್ಸಿ ಕುಳ್‌ಸೀರು ತಾನಾ || ೧೪ ||

‘ಕೇಳು ಕೇಳೂ ಬಸುವಪ್ಪ, ನೀ ಕೇಳೋ ಬಸುವಪ್ಪ
ನರಲೋಕ ನೀನೂ ಸಲ್ಗಬೇಕೂ ತಾನಾನಾ || ೧೫ ||

ಕಾಮಕ್ಕೆ ಜನಾ ಕೊಡುತೇ, ಮೇವುಕೆ ಹೊಲನಾ ಕೊಡುತೇ
ಇಂದೇ ತೋ ಡಿದ ಬಾವೀ, ಇಂದೇ ನೀರು ಬಂದೀ || ೧೬ ||

ರಂಬ್ಯಾರು ಮಿಂದೂ ಮಡಿಯುಟ್ಟೂ ಉಟ್ಟಿ | ಮಡಿಯಾ ಕಟ್ಟೀ
ಗೋವೀನಡುಗೀಗೇ ಅನುಕೂಲ’ || ೧೭ ||

‘ಗಂದಾಲಕ್ಷತ ತನ್ನಿ ಗಿಂಡೀಲುದಕವ ತನ್ನೀ
ಬಾಳೇಯ ಹಣ್ಣಾ ಸೋಲು ತನ್ನಿ | ಸೋಲು ತನ್ನೀ ನಮ್ಮನೀಯಾ || ೧೮ ||

ಬಸವೀನ ಪೂಜ್ಯಾ ಕನುಕೂಲ’
‘ಕೊಟುಗೀಲಿ ಕೆಸುರಂದೀ ಬೆಟ್ಟದಲ್ಲಿರುಬೇಡ || ೧೯ ||

ಲಲ್ಲೈದದೆ ನಿನ್ನಾ ದುಸುಮಾನಾ
ಅಲ್ಲೇದರೆ ನಿನ್ನಾ ದುಸುಮಾನ ಸಿರಿಕೌಲೀ || ೨೦ ||

ಹೊತ್ತುಳ್ಳರೆ ಬಾರೇ ಕೊಟುಗೀಗೇ’
‘ಕಾಳೀಗ್ ಗಂದಾ ಸೀಡೀ ಬೋಳೀಗಕ್ಸತ ನೀಡೀ || ೨೧ ||

ಹಾಳೀಯಾ ಕರುವೇನ ಬಲುವಿಂದ್ರಾ ಲಪ್ಪಯ್ಯಾ
ಚಿನ್ನದ ಬಟ್ಟಾ ಇಡೂಬಾರೋ ’ || ೨೨ ||

‘ಹಿತ್ತಲ ಕಡುಗೀನಾ ಮೊಟ್ಟುತೀ ಹುಲ್ಲನೆ
ಮೆಟ್ಟದೇ ಬಾರೇ ಸೀರಿಕೌಲಿ ನಿನ್ನೊಡತೀ || ೨೩ ||

ಕಟ್ಟದೇ ಹಾಲಾ ಕರವದೂ
ಕೆಂದಲಾಕಳೆ ನಿನ್ನಾ ಭಾರಾ ಕೆಚ್ಚಲ ಕಂಡೂ || ೨೪ ||

ಕಂಡವರಾ ದೃಷ್ಟಿ ತರವಲ್ಲ | ತರುವಲ್ಲ ವಸುತಾಯೇ
ಹಿಂಡಿನ ಮರು ಸೇರೀ ಬರೂಬೇಕೇ || ೨೫ ||

ಹುಲ್ಲು ಸಾಲವಂದಿ ಕೊಟುಗೀಗೇ ಬರುದಿರಬೇಡಾ
ಹೊತ್ತುಳ್ಳೆ ಕೊಟ್ಟುಗೀಗೇ ಬರೂಬೇಕೇ || ೨೬ ||

ಬರುಬೇಕು ನಿನ್ವೊಡಿಯಾ ಹೊನ್ನಿಗೆ ವಂದ್ ಹೋ ರಿಯಾ ತರುಸೂವಾ
ಇಂದೇ ನಮ್ಮನಿಲೀ ಗೋ ವಿನಬ್ಬ ಅಂದೇ || ೨೭ ||

ಗೋವೀಗ್ ಹೋದ್ ವಡಿಯಾ ತಿರೂಗ್ಬಂದಾ
ಗೋವೀಗ್ ಹೋದ್ ವಡಿಯಾ ತಿರ್ಗೆಸುತ ಲಹ್ನ ಸೊಂಟಾನಾ || ೨೮ ||

ವ್ಯಾವಾಳದ ಗುರುತಾ ಅವಗಿಲ್ಲಾ
ಅತ್ತೀಯೆಲ್ಲಾಮೇನೇ ಹತಕೊಳ್ಗಕ್ಕಿಯನ್ನ || ೨೯ ||

ಹತ್ತೂ ನೂರಡಿಕೇ ಕೊಡೀಯೇಲೇ
ಹತ್ತೂ ನೂರಡಿಕೇ ಕೊಡೀಯೆಲೇ ಕೊರಳಿಗೆ ದಾಬ || ೩೦ ||

ಯೇಳೇ ಸಿರಿ ಕೌಲೀ ಉಳಿಲಕ್ಕು
ಆಲಾದೆಲೆಮೇಲೇ ಆರ್ ಕೊಳಗಕ್ಕಿ ರೊಟ್ಟೀ || ೩೧ ||

ಅರ್ ಹಿಂಗರ ಕೊನೇ ಪಡಿಯೆಲೇ ಕೊರಳಿಗೆ ಚಿನ್ನದ ಡಾಬಾ
‘ಯೇಳೇ ಪಸು ತಾಯೇ ಉಣಲಕ್ಕೂ || ೩೨ ||

ನರಲೋಕ ನೀನೂ ಸಲ್ಗ್‌ಬೇಕೂ’ ತಾನಾನಾ
‘ಕಾವುಕೂ ಜನ್ರೂ ಬೇಡ ಮೇವಾಕೂ ಹೊಲವೂ ಬೇಡ || ೩೩ ||

ನರಲೋಕ ನಾನೂ ಸಲುಗ್ನಾರೇ’ ತಾನಾನಾ
‘ಕಟ್ಟುಕೆ ದಾಬಾ ಕೊಡುತೆ ಉಳವಲ್ಲೀ ಕೊಟ್ಟೆಗೆಯ ಕೊಡುತೇ || ೩೪ ||

ವರಸಕೆ ವಂದು ಹಬ್ಬ ನಿನುಗ್ ಕೊಡುತೇ’ ತಾನಾನಾ
‘ಕಟ್ಟುಕೆ ದಾಬಾ ಬೇಡ, ಉಳುಕೆ ಕೊಟುಗೀ ಬೇಡ || ೩೫ ||

ವರುಸಕೆ ವಂದೆ ಹಬ್ಬ ನನಗು ಬೇಡ’ ತಾನಾನಾ
ಲಟ್ಟೊಂದು ಮಾತಾ ಹೇಳೂವಾ ತಾಕಿನ್ನೇ || ೩೬ ||

ಸ್ವಾಮ್ಯವ್ರಿಗೆ ಸಿಟ್ಟು ಬರುವದೂ ತಾನಾನಾ
ಸ್ವಾಮ್ಯವ್ರಿಗೆ ಸಿಟ್ಟು ಬಂದಿಲ ಯೇನು ಮಾಡಿರು || ೩೭ ||

ಬೆಳ್ಳಿಯ ಬೆತ್ತ ತಡುದವ್ರೇ | ಸ್ವಾಮ್ಯವ್ರು
ಬಸಪ್ಪಗೆ ಯೆಯ್ಡು ಹೊಡುದೀರೂ ತಾನಾನಾ || ೩೮ ||

“ಕೇಳು ಕೇಳೂ ಬಸುವಪ್ಪ, ನೀ ಕೇಳೊ
ಬಸುವಪ್ಪ, ನಾ ಹೇಳೀದ ಮಾತಾ ಕೇಳೂಬೇಕೂ’ ತಾನಾನಾ || ೩೯ ||

‘ಕೇಳು ಕೇಳಿ ನನು ಸ್ವಾಮೀ, ನೀವೇ ಕೇಳಿ ನನು ಸ್ವಾಮಿ
ನರುಲೋಕ ನಾನೂ ಸಲುಗ್ ಬತ್ತೇ’ ತಾನಾನಾ || ೪೦ ||

ಅಟ್ಟೊಂದು ಮಾತ ಹೇಳೀರು ಸ್ವಾಮೀರು
‘ವಾಲಿ ಇಟ್ಟ ಅಕ್ಕ, ಕರಿಬಾರೇ ತಾನಾನಾ | ಬಸುವಪ್ಪ || ೪೧ ||

ಶೀರೀ ಉಟ್ಟ ಅಕ್ಕ ಕಟುನಾರೇ’ ತಾನಾನಾ
ಅಟ್ಟೊಂದ್ ಮಾತಾ ಹೇಳಿಲರು ಸ್ವಾಮ್ಯಾವ್ರು
‘ನರಲೋ ಕ ಸಲುಗೀ ಬರುಬೇಕೂ’ ತಾನನಾ || ೪೨ ||
*****
ಹೇಳಿದವರು: ಸೌ. ನಾಗಮ್ಮ ಮಾಸ್ತಿ ನಾಯ್ಕ, ಹೆಗಡೆಯೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...