ಕೃಷ್ಣನ ಕತೆಯನ್ನು
ನಂಬದೇ ಇರುವವರಿಗೂ
ನಂಬುವಂತೆ ಮಾಡುವ ಕೆಲವರಿ
ರುತ್ತಾರೆ, ಇವರು ಪದ್ಮ ಪತ್ರ
ಮಿವಾಂಭಸ, ತಾವರೆ ಎಲೆಯ
ಮೇಲಿನ ನೀರು, ಅಂಟಿಯೂ ಅಂಟ
ದಿರುವ ಇವರು ಹಿಡಿಯಲೂ ಬಲ್ಲರು
ಬಿಡಲೂ ಬಲ್ಲರು, ಎಲ್ಲರೂ ಇವರನ್ನು
ಬೈಯಲೂಬಹುದು ಹೊಗಳಲೂ ಬಹುದು
ಹಾಗಾಗೇ ಕೃಷ್ಣ ಎಂದದ್ದು
ಇವರು ಮಾತ್ರ ನಿರ್ಲಿಪ್ತ.
*****