ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಪಾಲ್ಮರ್ ಎಂಬ ಶ್ರೀಮಂತ ದಂತ ವೈದ್ಯನಿದ್ದಾನೆ. ತನ್ನ ವೃತ್ತಿಗಿಂತಾ ಪ್ರವೃತ್ತಿಯ ಬಗ್ಗೆ ವಿಪರೀತ ಹುಚ್ಚು. ವನ್ಯ ಜೀವಿಗಳ ಬೇಟೆಯಾಡುವುದು! ಕೆಲವರನ್ನು ಸುಟ್ಟರೂ ಹುಟ್ಟು ಗುಣ ಹೋಗಲಾರದು… ಎಂಬಂತೇ ಪಾಲ್ಮರ್ ಈ ಹಿಂದೆ ಅಮೆರಿಕಾದಲ್ಲಿ ಜಿಂಕೆಯನ್ನು ಬೇಟೆಯಾಡಿ ಸಿಕ್ಕಿ ಬಿದ್ದಿರುವರು. ಆ ಪ್ರಕರಣವಿನ್ನು ಹಸಿಹಸಿಯಾಗಿರುವಾಗಲೇ ಈತ ವಿಶ್ವಪ್ರಸಿದ್ಧ ಸೆಸಿಲ್ ಹೆಸರಿನ ಆಫ್ರಿಕನ್ ಸಿಂಹವನ್ನು ಈಗ ಆಗಸ್ಟ್ ೨೦೧೫ರಲ್ಲಿ ಕೊಂದಿದ್ದಾನೆ. ಇದು ವನ್ಯ ಜೀವಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿರುವನು!

ಜಿಂಬಾಬ್ವೆಯ ಹವಾಂಗೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಈ ಸಿಂಹದ ಫೋಟೋ ತೆಗೆಯುವುದೂ ಕೂಡಾ ಕಷ್ಟದ ಕೆಲಸ. ಬಿಲ್ಲು ವಿದ್ಯೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಪಾಲ್ಮರ್ ದಂತ ವೈದ್ಯ ಕೆಲಸಕ್ಕಿಂತ ಬೇಟೆ ಕೆಲಸ ಪ್ರವೃತ್ತಿಯನ್ನಾಗಿಸಿಕೊಂಡಿರುವರು!

ವನ್ಯ ಜೀವಿಗಳನ್ನು ಬೇಟೆಯಾಡುವುದು ಅಪರಾಧ. ಗುರುತರವಾದ ಶಿಕ್ಷೆ ದಂಡನೆ ಇದೆಯೆಂದು ಅರಿವಿದ್ದರೂ ಈತ ಅಮೆರಿಕಾದಿಂದ ಬೇಟೆಯಾಡಲು ಜಿಂಬಾಬ್ಬೆಗೆ ಬಂದಿದ್ದ! ಅಷ್ಟೊಂದು ಗೀಳು!

ಬ೦ದವನೇ ಈತ ಬಾಣ ಬಿಟ್ಟಿದ್ದಾನೆ! ಅದು ಗಾಯಗೊಂಡು ಕೆರಳಿ ತಪ್ಪಿಸಿಕೊಂಡಿದೆ. ಅದಕ್ಕಾಗಿ ೪೦ ಗಂಟೆಗಳ ಕಾಲ ಹುಡುಕಾಟ ನಡೆಸಿ ತದನಂತರ ಬಂದೂಕಿನಿಂದ ಗುಂಡು ಹಾರಿಸಿಕೊಂದಿದ್ದಾನೆ! ಅಲ್ಲದೆ ಅದರೊಂದಿಗೆ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾನೆ!

ಈತ ಎಂಥಾ ಹುಚ್ಚನೆಂದರೆ…. ಈ ರಾಷ್ಟ್ರೀಯ ಅಭಯಾರಣ್ಯದಲ್ಲಿ ಬೇಟೆಯಾಡುವುದು ಕೂಡಾ ಕಾನೂನುಬದ್ಧ ಇರಬಹುದೆಂದು ನಾನು ಭಾವಿಸಿದ್ದೆನೆಂದು ಆತ ತಪ್ಪೋಪ್ಪಿಕೊಂಡಿದ್ದಾನೆ.

ಈ ಅಭಯಾರಣ್ಯಕ್ಕೆ ನಿತ್ಯ ನೂರಾರು ಜನರು ಬಂದು ಹೋಗುತ್ತಿದ್ದ ಪ್ರವಾಸಿಗರ ಬಲು ನೆಚ್ಚಿನ ಮೆಚ್ಚಿನ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಈ ಸಿಂಹವನ್ನು ಕೊಂದಿರುವುದು ಭಾರೀ ಭಾರೀ ನೋವನ್ನುಂಟು ಮಾಡಿದೆಯೆಂದು ಜಿಂಬಾಬ್ವೆಯ ಸಫಾರಿ ನಿಯೋಜಕರ ಕೂಟದ ಅಧ್ಯಕ್ಷ ಇಮ್ಯನುವೆಲ್ ಪುಂಡ್ರಿಯಾ ಅವರು ಸಾರಿದ್ದಾರೆ.

ಈ ಪಾಲ್ಕರ್ ಸಿಂಹದ ಬೇಟೆಗಾಗಿ ೫೦ ಲಕ್ಷ ರೂಪಾಯಿ ನೀಡಿದ್ದ ಎಂದು ಈ ಇಮ್ಯನುವೆಲ್ ಪುಂಡ್ರಿಯಾ ಹೇಳಿರುವರು.

ಅಬ್ಬಾ! ಇಂಥಾ ಹುಚ್ಚರ ಸಹವಾಸದಿಂದ ಯಾರಿಗೆ ನೆಮ್ಮದಿ ಗೌರವ ಹೆಸರು ಬರಲು ಸಾಧ್ಯ ಹೇಳಿ? ಗೊತ್ತಿಲ್ಲದ ದಡ್ಡರಿಗೆ ಬುದ್ಧಿ ಹೇಳಬಹುದು. ಈತ ಗೊತ್ತಿರುವ ವಿದ್ಯಾವಂತ ವೈದ್ಯ ಇವನಿಗೆ ಹೇಗೆ ಬುದ್ದಿ ಹೇಳುವುದು ??
*****