ಗಣಪತಿಯೇ ನಮಿಪೆವು || ನಿನ್ನ ||
ಗಣಪತಿಯೇ ನಮಿಪೆವು || ನಾವು ||

ವಿದ್ಯಾರಂಭಕೆ ಸಿದ್ಧಿ ಸಾಧನೆಗೆ
ವಿಧ ವಿಧ ಕಲೆಗಳ ಕಲಿಕೆಗೆ
ವಿಜಯದ ಗಳಿಕೆಯ ಸುಲಭದ ಹಾದಿಗೆ
ವಿಘ್ನರಾಜನೇ ನಮಿಪೆವು ನಿನಗೆ ||೧||

ವೀರ ಯೋಧರ ದೇಶ ಸೇವೆಗೆ
ವಿನಯವಂತರ ಉನ್ನತಿಗೆ |
ವಿಚಾರವಂತರ ವೃದ್ಧಿಯ ಕಾರ್ಯಕೆ
ವಿಘ್ನ ಬರದಂತೆ ಯಶ ಕೊಡು ನಮಗೆ ||೨||

ಗಣಪತಿಯೇ ನಮಿಪೆವು || ನಿನ್ನ ||
ಗಣಪತಿಯೇ ನಮಿಪೆವು || ನಾವು ||
*****
೨೦-೧೦-೧೯೮೩