ಈ ನಾಡಿನ ಹಕ್ಕಿ ಚತುಷ್ಪಾದ
ನಿರೀಕ್ಷೆಯಲ್ಲಿವೆ ಹಸಿರಾದ ದಿನಗಳ

ಹಿಟ್ಲರ್ ಮರಿ ಹಿಟ್ಲರ್‌ಗಳೆಂದಳಿವರಂದು
ನಳ ನಳಿಸಿ ಕಂಗೊಳಿಸುವುದು ಬನ

ನಾಡು ನುಡಿಗಳ ನಡುವಣ ಬರ್‍ಲಿನ್‌ಗೋಡೆ ಬೀಳ್ವದೋ
ಬರುವುದಂದುಸಿರು ನೀಳವಾಗಿ

ಉಗ್ರರ ಅಟ್ಟಹಾಸದ ಕರಾಳ ದಿನಗಳಳಿದಂದು
ಈ ನಾಡಿನ ಕತ್ತಲು ಜಾರಿ ಬೆಳಕು ಮೂಡುವುದು

ಗಣಿದಣಿಗಳ ದನಿ ಅಡಗುವುದಂದು
ಸಸ್ಯ ಶ್ಯಾಮಲೆಯರು ಬಿಡುವರಂದು ನಿಟ್ಟುಸಿರು

ಕ್ರೂರತನವೆಂದಡಗುವುದಂದು
ವಿಷಗಾಳಿ ಸಿಹಿಯಾಗಿ ಬೀಸುವುದು

ಬೆನ್ನ ಮೇಲಿನ ಕತ್ತೆ ಭಾರ ಅಳಿದಂದು
ಮಲಿನ ಜಲ ತಿಳಿಯಾಗುವುದು

ಭ್ರಷ್ಟ ದುರಾಡಳಿತಗಳಳಿದಂದು
ರಾಗಿ ಜೋಳ ಮೂಲಂಗಿ ಕ್ಯಾರೆಟ್
ಕುಣಿದಾಡುವವು ಸಂತಸದಿ ಬಯಲು ತುಂಬ

ಆ ದುರ್‍ದಿನಗಳು ಮುರಿದಂದು
ರೆಕ್ಕೆ ಚತುಷ್ಪಾದಗಳೆಲ್ಲ ಸಮಾನ
ಅಂದ್ರ! ನಮಗೆಲ್ಲ ಸಂತಸದ ಹೊನಲು
*****