ಮುದ್ದು ಮಕ್ಕಳು,
ಮುದುಕರು
ಹಲವು ವಿಷಯಗಳಲ್ಲಿ
ಒಂದೇ.
ಪ್ರತಿಯೊಂದರಲ್ಲಿಯೂ
ಆಸಕ್ತಿ, ಕುತೂಹಲ.
ಆಸೆಪಟ್ಟಿದ್ದು
ಬೇಕೇ ಬೇಕೆಂದು
ಹಟ ಹಿಡಿಯವುದು
ಇತ್ಯಾದಿ.
ಆದರೆ ಮಕ್ಕಳು
ಬೇಕಾದ್ದನ್ನು
ಬಹು ಬೇಗ
ಕಲಿಯುತ್ತವೆ.
ಬೇಡವಾದುದನ್ನು
ಅಷ್ಟೇ ಬೇಗ
ಮರೆಯುತ್ತವೆ.
ಮುದುಕರಿಗದು
ಸಾಧ್ಯವಿಲ್ಲ.
*****
೨೦-೦೭-೧೯೯೨