ಹೆಣ್ಣು ಹೂವ ಮುಡಿಯಲೆಷ್ಟು ಚಂದ
ಅರಳುವುದು ಅವಳ ಮುಖಾರವಿಂದ

ಹೂವು ಮುಡಿ ಸೇರಲು ಅದೇನೋ ಬಂಧ
ಅರಳಿದ ಹೂವಿಗೆ ಎಲ್ಲಿಯದೋ ಆನಂದ

ಹೆಣ್ಣು ಹೂವು ಮುಡಿವಳೇಕೆಂದು ಹೇಳಲೇ?
ತಾನೂ ಒಂದು ಹೂವೆಂದು ತೋರಲಿಕ್ಕೇನೆ!

ಹೂವು ಇರುವುದು ಬಲು ಮೃದು
ಹೆಣ್ಣ ತನು ಮನವೂ ಅಷ್ಟೇ ಮೃದು

ಹೂವ ಅರಸಿ ದುಂಬಿ ತಾ ಬರುವಂತೆ
ಹೆಣ್ಣ ಅರಸಿ ಗಂಡು ಬರುವ ಸಂಕೇತದಂತೆ

ಹೂವು ಮುಳ್ಳದು ಜೊತೆಯಾಗಿ ಇರುವುದಂತೆ
ಹೆಣ್ಣಿನ ಜೀವನ ಕಾಯುವ ಗಂಡು ಜೀವದಂತೆ

ಹೂವು ದುಂಬಿ ಸೇರಲು ಫಲದ ವೃಷ್ಟಿ
ಗಂಡು ಹೆಣ್ಣು ಸೇರಲು ಜೀವನ ಸೃಷ್ಟಿ

ಈ ಸೃಷ್ಟಿ ವೈಚಿತ್ರ್ಯದಲಿ ಅಡಗಿದೆ ರೀತಿ
ಗಂಡು ಹೆಣ್ಣಿನ ಸುಮಧುರ ಜೀವನ ನೀತಿ
*****