ಎಂಥ ಜನ!

ಎಂಥ ಜನವಿದೊ ಹರಿಯೇ
ತಿಳಿಯದಂಥ ಈ ಮಾಯೆ
ನಾಶವಾಗುವ ಈ ತನುವ ಮೆಚ್ಚಿಹರು
ಇವರ ಭಾವದಲಿ ಕರಿಛಾಯೆ

ಲೆಕ್ಕವಿಲ್ಲದ ಹಾಗೆ ಧನ ಸಂಚಿಯಿಸಿ
ಮತ್ತೆ ಮರೆದಿಹರು ತಾವಾಗಿ
ಸ್ವಜನರಲಿ ಭೇದ ಭಾವ ಮೂಡಿಸಿ
ಮತ್ತೆ ಬಾಳಿಹರು ಹೊಲಸಾಗಿ

ನಾರಿಯರ ಕಂಡು ಹೌಹಾರಿದರು
ಕಾಮ ಹುಸಿಯಲಿ ಬೆಂದಿಹರು
ಮಾಡಲಾಗದ ಕಾರ್ಯ ಮಾಡಿಹರು
ಉನ್ನತ ನಾಮ ಹೊಂದಿಹರು

ಪಾಪ ಪುಣ್ಯಗಳಿಗೆ ಇವರಲಿ ಲೆಕ್ಕವಿಲ್ಲ
ಇಂದ್ರಿಯಗಳಲಿ ತಾವು ತುಂಬಿಹರು
ನಾಸ್ತಿಕರ ಒಡನಾಟ ಇವರಿಗೆ ಸೌಖ್ಯ
ಮಾಣಿಕ್ಯ ವಿಠಲನಿಗೆ ನಂಬದಿಹರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗುವೊಂದಿದ್ದರೆ
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೪ನೆಯ ಖಂಡ – ಸಾಧನಾಭಾವ

ಸಣ್ಣ ಕತೆ

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…