ಅವರಿಬ್ಬರು ಶ್ರೀಮಂತ ಮನೆತನಕ್ಕೆ ಸೇರಿದವರು. ಪ್ರೀತಿಯಲ್ಲಿ ಬಿಗಿದ ಜೋಡಿಗಳು. ಅವಳ ನಿಶ್ಚಿತಾರ್ಥಕ್ಕೆ ಒಂದು ಕೋಟಿ ಬೆಲೆಬಾಳುವ ಕಂಠೀಹಾರ, ಉಂಗುರದ ಕಾಣಿಕೆಯಿತ್ತ. ಮತ್ತೆ ಮದುವೆಗೆ ಐವತ್ತು ಲಕ್ಷ ಬೆಲೆಬಾಳುವ ಸೀರೆ ಕುಪ್ಪುಸದ ಉಡುಗೊರೆಯನ್ನು ಇತ್ತ. ಅವರ ಪ್ರೀತಿ ಅರ್ಪಣೆಯಲ್ಲಿ ಕೊನೆಗೆ ಬೆಲೆ ಬಾಳುವ ಎಲ್ಲವನ್ನೂ ದೂರವಿಟ್ಟು ಅವರು ಮಾತ್ರ ಕತ್ತಲೆಯಲ್ಲಿ ಒಂದಾಗಿದ್ದರು.
*****