ಭೀಷ್ಮ ನಿರ್‍ಯಾಣ

(ಮತ್ತೇಭವಿಕ್ರೀಡಿತ)

ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ-
ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್‌ ಕಾಲಿಟ್ಟುದೈ ಕತ್ತಲುಂ.
ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ
ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷೇತ್ರದೊಳ್.

ಶಿರಮಂ ಬಾಗಿಸೆ ಚಿಂತೆಯಿಂ, ಗಳದ ಸಂದೊಳ್ ಸಿಲ್ಕಲಾ ನಿಟ್ಟುಸಿರ್,
ಸುರಿದುಂ ಕಂಬನಿ ಜಾರೆ ಗಲ್ಲತಟದೊಳ್‌, ಕುಂತೀಕುಮಾರರ್ ವಲಂ
ಮರಣಾಸನ್ನನ ತಲ್ಪಮಂ ಬಳಸಿ ನಿಂದರ್; ಭೀಷ್ಮನುಂ ಕಂಗಳಂ
ತೆರೆದುಂ ನೋಡಿದನೊಮ್ಮೆ ಕೃಷ್ಣಮುಖಮಂ ಮಂದಸ್ಮಿತಾಹ್ಲಾದದಿಂ

“ಆರೆರೇ! ಧರ್ಮಜ! ಮಾತೃಭೂಮಿಯ ಪರಾಧೀನತ್ವದಾಪಾಶಮಂ
ತರಿದುಂ, ಧರ್ಮಪತಾಕೆಯಂ ಭರತಕ್ಷೋಣೀ ವಕ್ಷದೊಳ್‌ ನೆಟ್ಟಿಹೈ!
ಶಿರದೊಳ್‌ ಪಾತಕಮಿಲ್ಲಮಿಲ್ಲಮಿನಿಸುಂ ದುರ್ಯೋಧನ ಧ್ವಂಸದಿಂ,
ಧರೆಯಂ ಪಾಲಿಸು ಮೆಚ್ಚುವೊಲ್ ಪ್ರಜೆಗಳುಂ! ಕರ್ತವ್ಯದೊಳ್‌ ಕಣ್ಣಿಡೈ!

ನುಡಿಯಿಂದುಜ್ವಲಕಾಂತಿ ಭೀಷ್ಮಮುಖದೊಳ್‌ ವಿಭ್ರಾಜಿಸಲ್‌, ಹಸ್ತದಿಂ-
ದೊಡನಾಶೀರ್ವದಿಸುತ್ತ ಧರ್ಮಸುತನಂ, ಶ್ರೀಕೃಷ್ಣನುತ್ಸಂಗದೊಳ್
ಮುಡಿಯಂ ನೀಡಿ, ಮಲಂಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನೀಡಿ, ಮಲಗಿದಂ ಸುಭಟಭೀಷ್ಮಂ ಯೋಧಶಾರ್ದೂಲಮಂ
ದೊಡಲಿಂ ನಂದುದು ಲೇಶಜೀವಕಳೆಯುಂ-ನಿರ್ಯಾಣದಾ ದೀಪದೋಲ್
*****
(ಸುವಾಸಿನಿಯಿಂದ ೧೯೦೨)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಾಮರ್ ಟೀಚರಿಗೆ
Next post ನಮ್ಮ ಕರ್ತವ್ಯ ನಾವು ಮಾಡಿದ್ದೇವೆ

ಸಣ್ಣ ಕತೆ

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಜಂಬದ ಕೋಳಿ

  ಪ್ರಕರಣ ೩ ಜನಾರ್ದನ ಪುರದ ಹಳೆಯ ಇನ್ಸ್‍ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್‍ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟು ಕೊಂಡು, ಒಂದು ಚೆಕ್ಕು… Read more…

 • ಮುದುಕನ ಮದುವೆ

  ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…