ಕಾಲದ ಹಾದಿಯಲ್ಲಿ
ನಾವು ನೀವು, ನೀವು ನಾವು
ಅವು ಇವು, ಇವು ಅವು
ತಪ್ಪು ಒಪ್ಪುಗಳ ಸಂಘರ್‍ಷ||

ಧರ್‍ಮಕರ್‍ಮ ಹಾದಿಯಲ್ಲಿ
ಅರಿವು ಇರುವು, ಇರುವು ಅರಿವು
ವಿದ್ಯೆ ಅವಿದ್ಯೆ ಚಂಚಲ ಮನವು
ಜೀವ ಜೀವನ ಬಾಂಧಳ ಸಂಘರ್‍ಷ||

ಉತ್ತರವಿರದ ಪ್ರಶ್ನೆಯಲ್ಲಿ
ಏನು ಏತಕೆ ಏಕೆ ಎಲ್ಲಿಗೆ?
ಎಂಬ ಮೂರು ದಿನ ಮೂರು ಕ್ಷಣ
ಮೂರೇ ರಹದಾರಿಯಲ್ಲಿ ಸಂಘರ್‍ಷ||

ಬದುಕು ಭಾಂದವ್ಯದಲ್ಲಿ
ಜೋಡು ಎತ್ತಿನ ಸರದಾರ
ಎತ್ತಲೆತ್ತ ಹೋಗುವುದೊಂದೆ
ಹಾದಿಯಲಿ ಕಡಿವಾಣ ಹಾಕುವ ಸಂಘರ್‍ಷ||

ಗುಡಿಸಲರಮನೆಯಲ್ಲಿ
ನಾವು ನೀವು, ನೀವು ನಾವು
ಅವು ಇವು ಇವು ಅವು
ತಪ್ಪು ಒಪ್ಪುಗಳ ಭಾವ ಸಂಘರ್‍ಷ||
ಜೀವ, ಜೀವನ ಸಂಘರ್‍ಷ||
*****