Day: April 8, 2025

ಉಮರನ ಒಸಗೆ – ೬೪

ಆಗಳೆನ್ನ ಸಮಾಧಿಯೆಡೆಗೈದಿ ಮೆಲುಮೆಲನೆ, ನುಣ್ಚರದಿನೊಲವಿನಾ ಪಾಡುಗಳ ಪಾಡಿ, ಮಧುರಸವನದರಮೇಲತಿಶಯದಿ ನೀಂ ಸೂಸಿ, ಬೋರಲಿಡು ಮಧುವಿದ್ದ ಬಟ್ಟಲನು ದಯೆಯಿಂ. *****

ಮಲೆದೇಗುಲ – ೧೦

ಹಸಿರೆಲೆಗಳಂಜಲಿಯೊಳಾತು ರವಿ ತೇಜವಂ ಜೀವಕರ್ಘ್ಯವನೆರೆವ ಬನದ ನಲವು, ಕೆರೆಕೆರೆಯ ಹರಹಿನೊಳು ಜಲಹಾಸವನು ಮೆರಸಿ ತಿರೆ ಬಣ್ಣಗೊಳಿಸುವೀ ಬಿಸಿಲ ನಲವು, ಅಲೆ ಕೆದರೆ ತರು ಬೆದರೆ ನೀಲದಿಂ ಧುಮ್ಮಿಕ್ಕಿ […]