ಓಡಿ ಓಡಿ ಸುಸ್ತಾದೆ ಕ್ಯಾಲೆಂಡರ್ ಹಿಂದೆ ಓಡಿ ಕಡೆಗೆ ಮುಗ್ಗುರ್‍ಸ್ ಬಿದ್ದೆ ಗಡಿಯಾರದ ಹಿಂದೆ ಓಡಿ ಓಡಿ ದುಡ್ಡು ಕಂಡೆ ಇನ್ನೂ ಕಾಣುವೆ ಸಿಕ್ಕರೆ ಜೊತೆಗೆ ಎಲ್ಲೊ ಬೋನಸ್ ಉಂಡೆ ಬಾಡಿ ತುಂಬ ಸಕ್ಕರೆ ಓಡಿ ಓಡಿ ಶಿಖರವ ಕಂಡೆ ನಾನೆ ಮೊದಲಿಗನೆಂದೆ ಅಲ್ಲಿ...

ಬರೆದೂ ಬರೆದೂ ಸಾಕಾಯಿ ತಪ್ಪ ಈ ಪದ್ಯ ಇವುಗಳದು ಮುಗಿಯದ ತಂಟೆ ಒಂದಷ್ಟು ಹೊತ್ತು ಒಂದೊಂದು ರೂಪು, ಇವುಗಳ ಕೈಯೋ ಕಾಲೋ ಮುಖವೋ ಯಾವುದೂ ತಿಳಿಯುವುದು ಕಷ್ಟ ಆದರೂ ಇರಲಿ ಒಂದು ಅಂಗಿ ಪಾಪ ಬೆತ್ತಲೆ ನಿಂತಿದೆ ಸಡಿಲವೋ ಬಿಗಿಯೋ ಒಂದು ಅಂಗಿಯಿರಲಿ ಪಾಪ ಅದ...

ಮಣ್ಣಿನಲ್ಲೊಂದು ಅಣುವಾಗಿದ್ದೆ ಆಶೆಯ ಕುಲುಮೆ, ಆಗಸದೊಲುಮೆ ಹೊಮ್ಮಿದೆ ನಾ…. ಹೊರ ಹೊಮ್ಮಿದೆ ನಾ…. ಬೀಜವಾಗಿ. ಅಡವಿಯಲ್ಲೊಂದು ಗಿಡವಾಗಿದ್ದೆ ಗಾಳಿಯ ಗರಿಮೆ ವರುಣನ ಬಲುಮೆ ನೋಡಿದ ನಾ… ಜಗ ನೋಡಿದೆ ನಾ…. ಕುಸುಮವಾಗಿ. ಹ...

ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ “ಕಲ್ಯಾಣಿ,” ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು. ಕಲ್ಯಾ...

ಉದ್ಯೋಗರಹಿತ ಸಾಫ್ಟ್‌ವೇರ್ ವೀರ ವೀರಾಗ್ರಣಿಯರಿಗೆ ಆಯಿತು ಮುಖಭಂಗ ಲಕ್ಷೋಪಲಕ್ಷ ಅಲಕ್ಷ್ಯದಿಂದಲಿ ಕೂತು ಕಾಯುತಿಹರು ಬೆಂಚಿನಲಿ ಜಾತಕ ಪಕ್ಷಿಯಂತೆ ನಗರದಲಿ ಅತಿಯಾಸೆ ಬಿಸಿಲ ಬೇಗೆಯಲಿ ಬಾಯಾರಿಕೆಯ ತೃಷೆ ನೀಗಿಸಲು ಕಾಣಬಹುದೇ ಓಯಸಿಸ್ಸು ಈ ಮರುಭೂಮಿಯಲ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....