ಕಾಯ ಬೆಳೆಸಿದರೆ ಕೊಬ್ಬರಿ ಮಾಡ್ಯದನು ಕರಗಿಸಬೇಡವೇ?

ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು - ವಿಜ್ಞಾನೇಶ್ವರಾ *****

ನಾನು ಹೂವು ಮಧುರ ಮಾವು

ನಾನು ಹೂವು ಮಧುರ ಮಾವು ನಾನು ಶಿವನ ಗಾನವು ನಾನು ಅವನು ಕಬ್ಬು ಬಾಳೆ ಅವನೆ ನನ್ನ ಪ್ರಾಣವು ಮುಳ್ಳು ಇಲ್ಲ ಕಲ್ಲು ಇಲ್ಲ ಬೆಟ್ಟವೆಲ್ಲ ಬೆಣ್ಣೆಯು ಬಂಡೆಯೆಲ್ಲ ಉಣ್ಣೆ ಬಂಡೆ ದೊಡ್ಡ ಬೆಲ್ಲ...

ಬೆಂಕಿಯ ಮೂಲ

ಉರಿಯುತ್ತಿದೆ ಬೆಂಕಿ ಧಗಧಗ ಕೆನ್ನಾಲಿಗೆಯ ಚಾಚಿ ಭಗ ಭಗ ಮುಗಿಲೆತ್ತರ ವ್ಯಾಪಿಸಿ ಆಕ್ರಮಿಸುತ್ತಿದೆ ಉದ್ದಗಲ ನೋಡಲೆಷ್ಟು ಚೆನ್ನ ಸಪ್ತ ವರ್ಣಗಳ ನರ್ತನ ಕಣ್ತುಂಬಿಸಿ ಮನ ತುಂಬಿಸಿ ಆನಂದಿಸುವ ಪರಿ ಕೇಕೆ ಹಾಕಿದ ಕೂಗಿಗೆ ಮುಗಿಲಲ್ಲಿ...
ವಚನ ವಿಚಾರ – ಸುಮ್ಮನೆ ದುಃಖ

ವಚನ ವಿಚಾರ – ಸುಮ್ಮನೆ ದುಃಖ

ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ಮಾಯದ ಬೇಳುವೆ ಹುರುಳಿಲ್ಲ ಕೊಂದು ಕೂಗಿತ್ತು ನೋಡಾ ಗುಹೇಶ್ವರ [ಆರಕ್ಕೆ-ಬೇಳುವೆ, ಆಶ್ಚರ್ಯ, ಗೊಂದಲ, ಮರುಳು] ಅಲ್ಲಮನ ವಚನ....

ತೇರು!

೧ ಕಾಲನ ಕಲ್ಲಿನ ಚಕ್ರಗಳು! ತೊಡೆಗಳ ಎಲುವಿನ ಅಚ್ಚುಗಳು! ಪೊಳ್ಳಿನ ಹೃದಯದ ಹಂದರವು! ಗಂಡಿನ ಹೆಣ್ಣಿನ ಹುಡುಗರ ಕಳಸ! ೨ ಕಟ್ಟೋ ಮಂಗಲ ಸೂತ್ರಗಳ! ರುಂಡ ದಿಂಡಗಳ ಮಾಲೆಗಳ! ಬೆಳಗೋ ಕಂಗಳ ಕತ್ತಲೆದೀಪ! ಹಾಕೋ...