Day: October 2, 2020

#ಕವಿತೆ

ಸಮುದ್ರ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಸಮುದ್ರವಿಲ್ಲದ ಹೈದರಾಬಾದಿಗೆ ನಾನೇ ಸಮುದ್ರ- ವೆಂದು ಹರಡಿದೆ ಆ ಮಹಾನಗರದ ಉದ್ದಗಲ ತುಂಬಿ ಬೀದಿಗಳ ತುಂಬಿ ಕೇರಿಗಳ ಒಳಗೊಳುವೆನೆಂದು ನನ್ನ ತಳಮಳದಲ್ಲಿ ಅದರ ಕಳವಳ ತಲ್ಲಣಗೊಳ್ಳುತ್ತ ಕರೆದು ಕೈ ಚಾಚಿ ತೆರೆದು ತೆರೆಬಿಚ್ಚಿ ತೆರೆದರೂ ತೆರೆಯದ ಪ್ರಕ್ಷುಬ್ಧ ಚಿತ್ತ ಗುಡಿ ಗೋಪುರ ಮಿನಾರಗಳ ಸುತ್ತ ಸುತ್ತಿದೆನು ಮುತ್ತಿದೆನು ಎಟುಕದ ಎತ್ತರದಲ್ಲಿ ಮೋಡಗಳ ಬಿತ್ತಿದೆನು ಅಂಗಡಿ ಜಗಲಿಗಳಲ್ಲಿ […]

#ಸಾಹಿತ್ಯ

ಡಿ.ಎಚ್. ಲಾರೆನ್ಸ್‍ನ “ಸನ್ಸ್ ಎಂಡ್ ಲವರ್‍ಸ್”

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ಭಾಗ-೨ ಆತ ತನ್ನ ಹೆತ್ತಮ್ಮನನ್ನು ಒಬ್ಬ ಉತ್ಕಟ ಪ್ರೇಮಿಯಂತೆ ಪ್ರೀತಿಸುತ್ತಾನೆ. ತಾಯಿಯ ಪ್ರೀತಿಯ ಅಭಿಲಾಷೆಯಿಂದ ಹೊರಬರಲಾಗದೆ ತನ್ನನ್ನು ಆರಾಧಿಸಿ, ಪ್ರೀತಿಸಿದ ಬಾಲ್ಯದ ಗೆಳತಿಯಿಂದ ದೂರ ಸರಿಯುತ್ತಾನೆ. ಪ್ರೇಮ ಕಾಮದ ಹುಡುಕಾಟದಲ್ಲಿ ಅಸಂಬದ್ಧವೆನಿಸುವಂತೆ ತನಗಿಂತ ಹಿರಿಯಳಾದ ಮೂರು ಮಕ್ಕಳ ತಾಯಿಯಲ್ಲಿ ಅನುರಕ್ತನಾಗುತ್ತಾನೆ. ಆದರೂ ಅಲ್ಲಿಯೂ ತೃಪ್ತನಾಗದ ವಿರಮಿಸದ ವ್ಯಾಕುಲ ಚಿತ್ತ ತಹತಹಕೆ ಆತನದು. ಆತ ತನ್ನ ಗೆಳತಿಯರನ್ನು […]

#ಅನುವಾದ

ಕತ್ತಲಲ್ಲಿರುವವನು

0

ಏರಬೇಕೆ? ಹೇಗೆ? ಈ ಬೆಟ್ಟಗಳು ಮಂಜು ರಾಶಿಗಳಲ್ಲ. ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ. ಅಲ್ಲಿರುವ ನಿನಗೆ ಇಲ್ಲಿರುವ ನಾನು ಕಳಿಸಿದ ದುಃಖದ ಸುದ್ದಿ: ಒಮ್ಮೊಮ್ಮೆ ಎದ್ದಾಗಲೂ ನೆತ್ತರೊಳಗಿನ ಪರ್ವತ ನನ್ನ ಕೆಳಕ್ಕದುಮಿ ‘ಇಲ್ಲ’ ಅನ್ನುತ್ತದೆ. ‘ಬೇಡ’ ಅನ್ನುತ್ತದೆ. ಸ್ವಂತ ದುಃಖದ ಕಿರು ಸಂಕಟದಲ್ಲಿ ಕತ್ತಲು ನನ್ನನ್ನು ಕಟ್ಟಿದೆ. ***** ಮೂಲ: ಅಡೊನಿಸ್