ಸಂಸಾರ
ಹಣ್ಣು ಕಾಯಿ ಹೂಗಳ ತಾಯಿ ಬೇರು ತಂದೆ ನೀರು ಕತ್ತಲಕೋಣೆ ನೆಲ ಮನೆಯೊಳಗೆ ತಾಯಿ ದುಡಿಯುವ ಯಂತ್ರ ಕಡಲೊಳಗೆ ಕಾಳಗ ನಡೆಸಿ ಮುಗಿಲೊಳಗೆ ಪರಿಶುದ್ಧವಾಗಿ ತಂದೆ ಗೆದ್ದು ಬರುವ ಕರ್‍ತಾರ ಇಬ್ಬರ ಪಾತ್ರ ಕಾಡು ನಾಡು ನಗುವ ಸಮೃದ್ಧ ಹಸಿರ ಸಂಸಾರ *****
-೧- ಇಂದು ಆ ದಿನ ಬೆಳಿಗ್ಗೆ ಎದ್ದು ಹೊರಗೆ ಬರುವಾಗ ಬಹಳ ವರ್ಷಗಳಿಂದ ಖಾಲಿಯಾಗಿದ್ದ ನೆರೆಮನೆಗೆ ಯಾರೋ ಒಕ್ಕಲು ಬಂದಿದ್ದಂತೆ ತೋರಿತು. ಮನೆಯ ಇದಿರೊಂದು ಸಾಮಾನು ತುಂಬಿದ ಲಾರಿ ನಿಂತಿತ್ತು. ಒಳಗಿನಿಂದ ಮಾತು ಕೇಳಿಸುತ್ತಿತ್ತು. ನೋಡಿ ಐದಾರು ವರ್ಷಗಳಿಂದ ಖಾಲಿ ಬಿದ್ದಿದ್ದ ಆ ಮನೆಗೆ ಬಂದವರು ಯಾರು ಎಂದು ತಿಳಿದುಕೊಳ್ಳುವ ಕುತೂಹಲಕ್ಕಿಂತಲೂ ಹೆಚ್ಚಾಗಿ ಇಂದುವಿಗೆ ಬೇಸರವಾಯ್ತು. […]