ಹಣ್ಣು ಕಾಯಿ ಹೂಗಳ
ತಾಯಿ ಬೇರು
ತಂದೆ ನೀರು
ಕತ್ತಲಕೋಣೆ
ನೆಲ ಮನೆಯೊಳಗೆ
ತಾಯಿ ದುಡಿಯುವ ಯಂತ್ರ
ಕಡಲೊಳಗೆ ಕಾಳಗ ನಡೆಸಿ
ಮುಗಿಲೊಳಗೆ ಪರಿಶುದ್ಧವಾಗಿ
ತಂದೆ ಗೆದ್ದು ಬರುವ ಕರ್‍ತಾರ
ಇಬ್ಬರ ಪಾತ್ರ
ಕಾಡು ನಾಡು ನಗುವ
ಸಮೃದ್ಧ ಹಸಿರ ಸಂಸಾರ
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)