
ನನ್ನ ಕೂಸು ಗಿಣಿಯ ಕೂಸು ಹಸಿದು ಅಬ್ಬಾ ಎನುವದು ಸಂತಿ ಪ್ಯಾಟಿಗೆ ಹೊಂಟ ನನ್ನೆಡೆ ಅಂಬೆಗಾಲಿಲೆ ಬರುವದು ಅಂಗಿ ಟೊಪ್ಪಿಗಿ ಮುತ್ತು ಗೊಂಬಿ ಕೊಂಡು ಕೂಸನೆ ಮರೆತೆನು ಊರ ಮನೆಯಾ ಕೂಸು ಕಾಣುತ ನನ್ನ ಕೂಸೆ ಎಂದೆನು ಮನೆಯ ಕೂಸು ಮನೆಯಲುಳಿಯಿತು ಓಣಿ ಓಣಿಯ...
ಅಲ್ಲಿ ಬೆಳಗುವ ರವಿಯೆ ಇಲ್ಲಿ ಬೆಳಗುವ; ಹಗಲು ಬೇರೆ. ಆ ತಾರೆಗಳೆ ಇಲ್ಲಿ ಹೊಳೆವುವು; ಇರುಳು ಬೇರೆ. ಅದೆ ಮಳೆ ಗಾಳಿ, ಕೊರೆವ ಚಳಿ, ಎಳೆ ಬಿಸಿಲು ಹದ ಬೇರೆ. ಒಂದೆ ಅನುಭವ, ಬೇರೆ ಹೊರ ಒಡಲು. ಚಿತ್ತ ಮೆಲುಕಾಡಿಸಿದ ಸುಖ ದುಃಖ ಧಗೆಯೆಲ್ಲ ಒಂದೆ ಇಡಿ ಲ...













