ನನ್ನ ಕವಿತೆ

೧ ಕವಿತೆ ಹುಟ್ಟುವುದು ಮಹಲಿನಲ್ಲಲ್ಲ, ಮುರುಕು ಜೋಪಡಿಗಳಲ್ಲಿ. ಕವಿತೆ ಹುಟ್ಟುವುದು ಝಗಝಗಿಸುವ ದೀಪಗಳ ಬೆಳಕಿನಲ್ಲಲ್ಲ ಬುಡ್ಡಿ- ಬೆಳಕಿನ ಮಿಡುಕಿನಲ್ಲಿ. ಕವಿತೆ ಹುಟ್ಟುವುದು ಕಲ್ಪನೆಯ ಮೂಸೆಯಲ್ಲಲ್ಲ ದೈನಂದಿನ ಘಟನಾವಳಿಗಳಲ್ಲಿ. ಕವಿತೆ ಹುಟ್ಟುವುದು ತುಂತುರುಮಳೆಯಲ್ಲಲ್ಲ ನೊಂದವರ ಕಣ್ಣೀರಿನಲ್ಲಿ....

ನೆನಪು ಮತ್ತು ಮರೆವು

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವೇಕಕ್ಕೆ ಅಪ್ಪಣೆ ಕೊಟ್ಟು...