ಕನ್ನಡ ಸಮುದಾಯದ ಬಹುಮುಖೀ ಕನಸಾಗಿದ್ದ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ಸಂಪನ್ನಗೊಂಡು ವಾರ ಕಳೆದಿದೆ. ಆಳುತ್ತಿರುವ ಸರ್ಕಾರವಂತೂ ಇದನ್ನೊಂದು ಅಭೂತ ಪೂರ್ವಸಾಧನೆಯೆಂದು ಬಿಂಬಿಸಲು ಮತ್ತು ಅದನ್ನು ನಂಬಿಸಲು ಮತ್ತೆ ಮತ್ತೆ ಜಾಹೀರಾತು ನೀಡಿ ಜನಸಮುದಾ...

ನನ್ನ ಹೇಣ್ತೆ ನನ್ನ ಹೇಣ್ತೆ ನಿನ್ನ ಹೆಸರೇನ್ಹೇಳಲಿ ಗುಣವಂತೆ || ಪ || ಘನ ಪ್ರೀತಿಲೆ ಈ ತನುತ್ರಯದೊಳು ದಿನ ಅನುಗೂಡುನು ಬಾ ಗುಣವಂತೆ ||ಅ.ಪ.|| ಮೊದಲಿಗೆ ತಾಯ್ಯಾದಿ ನನ್ನ ಹೇಣ್ತೆ ಮತ್ತೆ ಸದನಕ ಸೊಸಿಯಾದಿ ನನ್ನ ಹೇಣ್ತೆ ಮುದದಿಂದ ಮೋಹಿಸಿ ಮದುವ್...

ಸುಗ್ಗಿ ಮಾಡೋಣು ಬಾರವ್ವ ಗೆಳತಿ ಸುಮ್ಮನಾಕ ಕುಳತಿ || ಪ || ಅಗ್ಗದ ಫಲಗಳ ಕೊಯ್ಯಲಿಕ್ಕೆ ಹೊಲದವ- ರೊಗ್ಗಿಲೆ ಕರೆದರೆ ಹಿಗ್ಗಿಲಿ ಹೋಗಿ ||ಅ.ಪ.|| ಹೊಲದವ ಕರೆದರೆ ಹೋಗಲಿಬೇಕು ನೆಲೆಯನು ತಿಳಿಯಬೇಕು ಕುಲದವರೊಂದು ಸಲಗಿಯ ಸಾಕು ಬಲು ಜೋಕಿರಬೇಕು ಹೊಲದ...

ಮೋಹದ ಹೆಂಡತಿ ಸತ್ತ ಬಳಿಕ ಮಾವನ ಮನೆಯ ಹಂಗಿನ್ಯಾಕೋ || ಪ || ಸಾವು ನೋವಿಗೆ ತರುವ ಬೀಗನ ಮಾತಿನ ಹಂಗೊಂದೆನಗ್ಯಾಕೋ ||ಅ.ಪ.|| ಖಂಡವನದಿ ಸೋಂಕಿ ತನ್ನ ಮೈಯೊಳು ತಾಕಿ ಬಂಡೆದ್ದು ಹೋಗುವದು ಭಯವ್ಯಾಕೋ ಮಂಡಲನಾಡಿಗೆ ಪಿಂಡದ ಗೂಡಿಗೆ ಚಂಡಿತನದಿ ಚರಿಸ್ಯಾ...

ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ ಆಲಸ್ಯಮಾಡದೆ ಹೋಗುಣ ಬಾರೆ || ಪ || ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು ಗಾಳಿ ಮಳೆಗೆ ಉದುರುತಿಹವು ಪೇಳುವೆ ಸುತ್ತಲು ಸಣ್ಣ ಮಳಲಿನೊಳು ಸೀಮಿಕಲ್ಲು ನಟ್ಟಿರ್ಪು...

ವ್ಯವಸ್ಥೆಯ ವಿರುದ್ಧ ತನ್ನದು ನಿರಂತರ ಹೋರಾಟವೆಂದು ಆ ಹೋರಾಟಕ್ಕಾಗಿ ತನ್ನ ಜನರನ್ನು ಸಜ್ಜುಗೊಳಿಸುವೆನೆಂದು ಹೇಳುತ್ತಲೇ ಪ್ರಸಿದ್ಧಿಗೆ ಬಂದ ತಿಪ್ಪೇಶಿಯ ಸೃಜನಶೀಲತೆ ಲೋಕವನ್ನು ಬೆರಗುಗೊಳಿಸಿತ್ತು. ಅವನ ಕಾವ್ಯ ನಾಟಕಗಳು ಸಮಾಜದ ಜ್ವಲಂತ ಸಮಸ್ಯೆಗಳ...

ಜಾಣೆ ನೋಡುನು ಬಾರೆ ಜಾತಕ ರಂಗದೊಳು ಕೋಣ ಬಂದಾಟ ಕೆಡಿಸಿತು ಚದುರೆ ||ಪ|| ನಾಲ್ಕು ಕಾಲಿನ ಕೋಣ ನಾಲ್ಕು ವೇದಗಳಿಂದ ಮಲ್ಕಿ ಆಟದೊಳು ಮಾಯವಾಯ್ತು ಚದುರೆ ||೧|| ಮಂಡಲದೊಳಗಿರು ಉದ್ದಂಡ ಮೃಗವಿದು ಗುಂಡಿ ಆಟದೊಳು ಗಮಕಾಯ್ತು ಚದುರೆ ||೨|| ಹೋಗಿ ಜಂಗಮರ...

ಬುದ್ಧನ ಜೀವನ ಕುರಿತಾದ ಹೊಸ ನಾಟಕದ ತಾಲೀಮು ಶುರುವಾಗಿತ್ತು. ನಿರ್ದೇಶಕ, ಸಂಗದೊಡೆಯರು, ಸಹಕಲಾವಿದರು ಆ ನಟನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಯಾಕೆಂದರೆ ಅವನು ಬುದ್ಧನ ಪಾತ್ರವನ್ನು ನಿರ್ವಹಿಸುತ್ತಿದ್ದ. ಅದ್ಭುತ ಅಭಿನಯಕ್ಕೆ ಹೆಸರಾ...

ಬಟ್ಟಿ ಕಟ್ಟಸಿದೆ ರುದ್ರವ್ವಾ ನಿನ್ನ ಹೊಟ್ಟಿಯ ಕೂಸಿಗಿನ್ನೆಷ್ಟುಪದ್ರವ್ವಾ ||ಪ|| ಹೊಕ್ಕಳ ಕೆಳಗೆ ಐತ್ರವ್ವ್ ಎರಡು ಪಕ್ಕಡಿ ಎಲುಬಿನೊಳು ಮನಿಮಾಡೇತ್ರವ್ವಾ ಕುಕ್ಕಿ ಕಾಳಜಕ್ಕೇರೇತ್ರವ್ವಾ ಅದನ ತಿಕ್ಕಿ ನಿಲ್ಲಿಸ ನನ್ನ ತಾಯವ್ವ ||೧|| ಪಿಂಡ ಮಾಂಸದ ...

ಅಡಗಿ ಮಾಡುವರೇನೋ ಇಬ್ಬರು ಕೂಡಿ ಅಡಗಿ ಮಾಡುವರೇನೋ ||ಪ|| ಪೊಡವಿ ಪಾಲಿಪ ಗೊಡವಿಯಾಕೆ ಕೆಡುವ ಸಿಟ್ಟಿನ ಕಲಹ ಸಾಕೆ ಬಲಿಯ ಬೀಳುವ ವಲಿಯ ಗುಂಡು ಸಲುಹುವದು ಸಾಕ್ಷಾತ ಎನಗೆ ||ಅ.ಪ.|| ಪಲ್ಲೆ ಪಚ್ಚಡಿಯ ಮಾಡಿ ನಮ್ಮ ಗುರುವಿಗೆ ಮುಚ್ಚುತ ತಾ ನೀಡಿ ಹಸರಿನ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....