ಜಾಣೆ ನೋಡುನು ಬಾರೆ ಜಾತಕ ರಂಗದೊಳು
ಕೋಣ ಬಂದಾಟ ಕೆಡಿಸಿತು ಚದುರೆ ||ಪ||

ನಾಲ್ಕು ಕಾಲಿನ ಕೋಣ ನಾಲ್ಕು ವೇದಗಳಿಂದ
ಮಲ್ಕಿ ಆಟದೊಳು ಮಾಯವಾಯ್ತು ಚದುರೆ ||೧||

ಮಂಡಲದೊಳಗಿರು ಉದ್ದಂಡ ಮೃಗವಿದು
ಗುಂಡಿ ಆಟದೊಳು ಗಮಕಾಯ್ತು ಚದುರೆ ||೨||

ಹೋಗಿ ಜಂಗಮರೆಲ್ಲ ಆಡುವ ಆಟವು
ಸಾಗಿ ಬಂದಾಟವ ಸರಸಿ ಸರಸೀತು ಚದುರೆ ||೩||

ಸಾಧು ಸಜ್ಜನರ ಮುಂದೆ ಅಗಾಧವಾಗುವಂತೆ
ಇದೇ ಜನರ ಮಂಂದೆ ಕೇಳದಾಯ್ತು ಚದುರೆ ||೪||

ದೇಶಕಧಿಕವಾದ ಶಿಶುನಾಳಧೀಶನ
ರಸಿಕರೊಡನೆ ಜ್ಞಾನ ಶಿಶುವಾಯ್ತು ಚದುರೆ ||೫||
*****