ಮಗು ಅಳುತ್ತಲೇ ಇತ್ತು. “ಏನು! ಮಗು! ಏನಾಯಿತು?” ಎಂದರು ನೋಡಿದವರು. ಅವರ ಮಾತನ್ನು ಕೇಳಿಸಿಕೊಳ್ಳದೆ ಆಕಾಶ ಬೀಳುವಂತೆ ಮಗು ಅಳುತ್ತಲೇ ಇತ್ತು. ಮನೆಯ ಗೇಟಿನ ಹತ್ತಿರ ನಿಂತು ಅಳುತ್ತಿದ್ದ ಮಗುವನ್ನು ದಾರಿಯಲ್ಲಿ ಹೋಗುವವರೆಲ್ಲ “ಏನಾಯಿತು ಮಗು?” ಎಂದು ವಿಚಾರಿಸಿದಾಗ ಅಳುವೆ ಉತ್ತರವಾಗುತಿತ್ತು. ಒಳಗೆ ಕೆಲಸದಲ್ಲಿದ್ದ ತಾಯಿ ಮಗುವಿನ ಅಳುವನ್ನು ಕೇಳಿ ಓಡಿಬಂದು “ಏನಾಯಿತು? ಹೇಳು ಪುಟ್ಟಾ” ಎಂದಳು. “ಅಪ್ಪ, ನನ್ನ ಚಪ್ಪಲಿ ಹಾಕಿಕೊಂಡು ಹೋದರು” ಎಂದು ಗಟ್ಟಿಯಾಗಿ ರಾಗ ಎಳೆಯಿತು.” “ಅಪ್ಪಂಗೆ ನಿನ್ನ ಸಣ್ಣ ಚಪ್ಪಲಿ ಹಿಡಿಸೋಲ್ಲ ಪುಟ್ಟಾ” ಅಂತ ವಾದಿಸಿದಳು, ಅಮ್ಮ. “ಅಮ್ಮ ಅಪ್ಪನ ದೊಡ್ಡ ಚಪ್ಪಲಿ ನಂಗೆ ಸಲೀಸಾಗಿ ಹಿಡಿಸುತ್ತೆ, ಅಮ್ಮ!” ಎಂದಿತು ಮಗು.
*****