ಮರದ ರೆಂಬೆಯ ಹಸುರೆಲೆಯ ಹಾಸಿನಲ್ಲಿ ಕುಳಿತಿದ್ದವು, ಮೂರು ಇಬ್ಬನಿಗಳು. ಎಲೆಯ ಕೊನೆಯಿಂದ ಜಾರಿ ಬಿದ್ದು ಪ್ರಾಣ ಕಳಕೊಂಡ ಹನಿಗಳಿಗಾಗಿ ಮರುಗಿ ಕಣ್ಣೀರಿಡುತ್ತಿದ್ದವು. ಒಂದು ತುಂಟ ಹುಡುಗ ರೆಂಬೆ ಜಗ್ಗಿ ಉಯ್ಯಾಲೆ ಆಡುತ್ತಲೇ ಇದ್ದ. ಎಲ್ಲಾ ಇಬ್ಬನಿಗಳು ಪಟ ಪಟ ಉದರಿ ಮಾಯವಾದವು. ಅವುಗಳಿಗಾಗಿ ಅಳುವವರು ಯಾರೂ ಇರಲಿಲ್ಲ.
*****