ಸೂಳೆವ್ವ ನಾನೂ ಹುಚಬೋಳೆ

ಸೂಳೆವ್ವ ನಾನೂ ಹುಚಬೋಳೆ ||ಪಲ್ಲ||

ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ
ಗಂಡುಳ್ಳ ದಾರಿ ನೋಡ್ಕೊಂಡೆ
ಯಾಗಂಡ ಛೂಗಂಡ ಫೂಗಂಡ ಪಡಪೋಶಿ
ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧||

ಹೊಸಗಂಡ ಹುಚಗಂಡ ಪಂಚೇರು ಪಡಿಗೋದಿ
ಹೋಳೀಗಿ ಮ್ಯಾಗ ಹೆರತುಪ್ಪೋ
ತಾಳೀಯ ಆ ಗಂಡ ಕಾಳೀಯ ಉದ್ಯಾನೆ
ನನಪ್ರೀತಿ ಇವಗಿನ್ನ ಗಪಗಪ್ಪೋ ||೨||

ಉಪ್ಪರಗಿ ಏನ್ಚಂದ ತೂಗ್ಮಂಚ ಭೋಚಂದ
ಮುಪ್ಪಾದ್ರೂ ಇರಲೇಳ ಹೊಸಗಂಡ
ಬಿಳಿಮೀಸಿ ಇದ್ರೇನ ರಾತ್ರ್ಯಾಗ ಕರಿಯೆಲ್ಲ
ಪ್ರೀತ್ಯಾಗ ಜಾತ್ರೀಯ ಜೋರ್‍ಗಂಡ ||೩||

ಗುಳದಾಳಿ ಕಿತ್ಯಾನ ಹೊಸತಾಳಿ ಕಟ್ಯಾನ
ಹೊಸಗಂಡ ಹಳೆಕುಬಸ ಹರದಾನ
ಹೊಸ ಸೀರಿ ತಂದಾನ ಹಸನಾಗಿ ಉಡಿಸ್ಯಾನ
ಮುದುವಾದ್ರು ನನಗಿಲ್ಲ ನುಕಸಾನ ||೪||
*****
ಸೂಳಿ = ಭಗವಂತನ ಪ್ರೇಯಸಿ
ಹುಚಬೋಳಿ = ಮುಗ್ಧ ಆತ್ಮ
ಗಂಡ = ಲೌಕಿಕ ಭೋಗ
ಮಿಂಡ = ಪರಮಾತ್ಮ
ಸೀರಿ = ದೇಹಾಭಿಮಾನ
ಮುದುವ = ಅನಾದಿ ಅನಂತ ಭಗವಂತ
ಉಪ್ಪರಗಿ = ಮುಕ್ತಿಧಾಮ, ಶಾಂತಿ ಧಾಮ
ಹಳೆ ಕುಬಸ = ಹಳೆ ಸಂಸ್ಕಾರಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೊಡ್ಡ ಚಪ್ಪಲಿ
Next post ದೊಡ್ಡದು

ಸಣ್ಣ ಕತೆ

  • ಸಂತಸದ ಚಿಲುಮೆ

    ಅಕ್ಬರ ಮಹಾರಾಜ ಒಮ್ಮೆ ಆಸ್ಥಾನದಲ್ಲಿ ‘ಸಂತಸದ ಚಿಲುಮೆ ಎಲ್ಲಿದೆ’ ಎಂದು ಅಲ್ಲಿದ್ದವರನ್ನೆಲ್ಲಾ ಕೇಳಿದ. ಆಸ್ಥಾನದ ಪಂಡಿತ ಮಹಾಶಯನೊಬ್ಬ ಎದ್ದುನಿಂತು - ಮಹಾರಾಜ ಸಂತಸದ ಚಿಲುಮೆ ನಿಜಕ್ಕೂ ಎಲ್ಲಿದೆ… Read more…