ಅವನಿಗೆ ಸಂಸಾರ ದುಸ್ಸಾರವಾಯಿತು. ತಲೆಯ ಮೇಲೆ ಬೆಟ್ಟ ಬಿದ್ದಂತೆ ಅನಿಸಿತು. ಈ ತಾಪತ್ರಯದ ಸಂಸಾರ ಸಾಗರ ದಾಟಲಾರೆನೆಂದು ಬೆಟ್ಟದ ತುದಿಯಿಂದ ನೆಲಕ್ಕೆ ಧುಮುಕಿ ಆತ್ಮಹತ್ಯೆಗೆ ಪ್ರಯತ್ನಿಸಿದ. ಅವನ ದೇಹ ಒಂದು ಕುಂಬಳದ ಹೊಲದಲ್ಲಿ ಬಳ್ಳಿಗಳ ಮೆತ್ತೆಯಲ್ಲಿ ಬಿದ್ದಿತ್ತು. ಪ್ರಜ್ಞೆ ಬಂದು ಕಣ್ಣು ತೆರದಾಗ ಅವನಿಗೆ ಕಾಣಿಸಿದ್ದು ಕೋಮಲವಾದ ಬಳ್ಳಿ ದೊಡ್ಡ ಕುಂಬಳವನ್ನು ನಿರಾತಂಕವಾಗಿ ಹೊತ್ತು ಹರಡಿ ಹಬ್ಬಿತ್ತು. ಬಳ್ಳಿಗೆ ಕುಂಬಳ ಭಾರವಗಿಲ್ಲ ಎನ್ನುವುದು ಅವನಿಗೆ ಮನದಟ್ಟಾಯಿತು.
*****