
ಹರಿದಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||ಪ|| ಕಡು ವಿಷಯದಿ ಸಂಸಾರಕ ಮರಗುತ ಪೊಡವಿ ತಳದಿ ಮಿಡಿಕ್ಯಾಡುವ ಮನಸಿಗೆ ಮಚ್ಚಿ ಮಚ್ಚಿಲ್ಹೊಡೆದು ನಿಲ್ಲಿಸು ಜಾಣ ||೧|| ಸಿರಿ ಸಂಪತ್ತು ಸೌಭಾಗ್ಯ ತನಗೆ ಬಲು ಪಿರಿದಾಗಲಿ ಬೇಕೆಂಬುವ ಮನಸ...
ಮನಸೇ ಮನಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನಬ್ಯಾರೆಲೋ ಮನಸೇ ||ಪ|| ತನುತ್ರಯದೊಳು ಸುಳಿದಾಡುವ ಜೀವನ ಗುಣವರಿತರೆ ನಿಜಬಾರಲೋ ಮನಸೇ ||೧|| ದಶದಿಕ್ಕಿಗೆ ಹಾರಾಡುವ ಹಕ್ಕಿಯು ಸಿಕ್ಕು ತಪ್ಪಿಸೋಪರಿ ಬ್ಯಾರಲೋ ಮನಸೇ ||೨|| ಗುರುಗೋವಿಂದನ ...
ಹೊತ್ತುಗಳಿಯದಿರೆಲೋ ಮನವೆ ||ಪ|| ಗೊತ್ತು ಇಲ್ಲದೆ ನೀನು ಬರಿದೆ ಚಿತ್ತಚಂಚಲನಾಗಿ ಚರಿಸ್ಯಾಡುತ್ತ ನಾನಾ ವಿಷಯಗಳನು ಹೊತ್ತು ಶ್ರಮದೊಳಾಡಬೇಡ ||ಅ.ಪ.|| ವ್ಯರ್ಥಒಂದಿನವಾಗಿ ತೊಲಗಿದಿ ಅತ್ತು ಯಮನ ದೂತರೊಯ್ಯೆ ಚಿತ್ರಗುಪ್ತರು ಲೆಖ್ಖ ತೋರಿ...
ಎಂತು ಮರಿಯಲವ್ವಾ ಇವನಾ ಶಾಂತ ಶರೀಫನಾ ಅಂತರಂಗದಲ್ಲೇ ಬಂದು ಚಿಂತೆ ದೂರ ಮಾಡಿದನವ್ವಾ ||೧|| ಕಾಲ ಕರ್ಮವ ಗೆದ್ದು ಲೀಲೆಯಾಡಿದನೆ ಮೇಲುಗಿರಿಯ ಮೇಲಕ್ಕೆ ಹತ್ತಿ ಅಲಕ್ಕನೆ ಹಾರಿದನೆ ||೨|| ಜನನ ಮರಣವಗೆದ್ದು ತಾನು ಶಿವನಲೋಕ ಕಂಡನೆ ಭುವನದೊಳು ಶಿಶುವಿ...
ಯೋಗಿಯ ಕಂಡೆನು ಹುಚ್ಚೇಂದ್ರ ಯೋಗಿಯ ಕಂಡೆನು ನಾನು ||ಪ|| ಭೋಗವಿಷಯವ ತ್ಯಾಗ ಮಾಡಿದ ಆಗಮವ ತಿಳಿದಂಥ ಮಹಾಗುರು ಲಾಗದಿ ಲಕ್ಷಣವ ಬಿಂದುವಿನೊಳಗೆ ತೋರಿದ ಈಗ ನೋಡಿದೆ ||೧|| ಸ್ಥೂಲದೇಹವ ತಾಳಿದ ಜನರ ಬಿಟ್ಟು ಮೂಲ ಬ್ರಹ್ಮವ ಪೇಳಿದ ಕಾಲ ಕರ್ಮವ ಗೆಲಿದು ...
ಚಿಂತೆಯಾತಕೋ ಯೋಗಿಗೆ ಸದ್ಗುರುವಿನಂತರಂಗದ ಭೋಗಿಗೆ ||ಪ|| ಕಂತುವಿನ ಕುಟ್ಟಿ ಕಾಲಮೆಟ್ಟಿ ನಿಂತು ನಿಜ ಶಾಂತದಲಿ ಮೆರೆಯುವಾತನಿಗೆ ||ಅ.ಪ.|| ಕರಣಗಳ ಕಳಿದಾತಗೆ ಮರಣ ಮಾಯಾದುರಿತಭವವನ್ನು ಅಳಿದಾತಗೆ ಶರಣಸೇವೆಯೊಳಿದ್ದು ಹರಣ ಮತ್ಸರಗೆದ್ದು ಧರಣಿಯೊಳು ...
ಯೋಗಿಪದಕೆ ಅರ್ಥವಿಲ್ಲವೋ ಸದ್ಗುರು ನಿರಾಲ ||ಪ|| ಭೋಗ ವಿಷಯ ನೀಗಿ ಭವದ ಬ್ಯಾಗಿಯಳಿದು ಬ್ರಹ್ಮ ಸುಖದ ||ಅ.ಪ.|| ತನುವಿನಾಶಯರಿದು ಮಾಯಾ- ಗೊನಿಯ ಕೊರಿದು ಕರ್ಮಸಾಗರ ಕನಸಿನಂತೆ ತಿಳಿದು ತಾನೆ ಚಿನುಮಯಾತ್ಮನಾಗಿ ಮೆರೆವ ||೧|| ಶಿಶುನಾಳೇಶ ಈಶನಲ್ಲಿ ...
ಯೋಗಮುದ್ರಿ ಬಲಿದವನೆಂಬೋ ಆಗ ಮೂಲದಿ ನಿನಗೆ ಭೋಗ ವಿಷಯ ಲಂಪಟಂಗಳನರಿಯದೆ ಲಾಗವನರಿಯದೆ ಹೀಗಾಗುವರೆ ||೧|| ವಿಷಯದೊಳಗೆ ಮನಸನಿಟ್ಟು ಹುಸಿಯ ಬೀಳುವರೇನೋ ಮರುಳೆ ಅಸಮ ತೇಜವನು ತನ್ನೊಳು ಕಾಣುತ ಶಶಿಕಿರಣದ ರಸವನರಿಯದೆ ||೨|| ಬಗಿದುನೋಡಿ ಬ್ರಹ್ಮಜ್ಞಾನ ...
ಸಂಸಾರದಿಂದ ಸದ್ಗತಿಹೊಂದಿ ಹವಣವರಿತು ಮಾಯೆಯ ಜಯಸಿ ಮರಣ ಗೆಲಿದವನೇ ಶಿವಯೋಗಿ ||ಪ|| ಭವಭಾರ ಜಾಯ ಕರ್ಮಗಳನು ಬಯಸಿ ಬ್ಯಾರೆ ಬಯಲು ಬ್ರಹ್ಮದಿ ಬೆರೆತು ಬ್ರಹ್ಮಜ್ಞಾನ ದೊರೆವುತನಕ ತ್ರಿನಯನ ಆಶ್ರಯ ಹಿಡಿದು ಆವುದನರಿಯದೆ ಮುನ್ನಾ ಅನುವರಿತು ಸವಿಗರಿದು ...
ಪರಮಾನುಬೋಧೆಯೋ ಈ ಪರಮಾನುಬೋಧೆಯೋ ||ಪ|| ಸರಸಿಜ ಭವಗಿದು ಅರಕಿಲ್ಲದ ಪರಮಾನುಬೋಧೆಯೊ ||೧|| ಕಲಶಜಾಕೃತವನೆ ಈ ಬಲಯುತ ಛಲದಿ ನಿಲಯರೂಪ ||೨|| ಶಿಶುನಾಳಧೀಶನ ತಾ ಈ ಅಸಮ ಸ್ವರೂಪದ ಶಶಿಕಿರಣವೋ ||೩|| ****...














