ಹೇಸಬಾರದೆ ಮನಸೆ
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ಹೇಸಬಾರದೆ ಮನಸೆ ನೀ ಹೇಸಬಾರದೆ ಆಸೇದ ನದಿಯೊಳ್ ಈಶ್ಯಾಡುವುದಕೆ ಹೇಸಬಾರದೆ ||ಪ|| ಭೂಮಿಗುದಿಸಿ ಭವದಾ ಮಹಾಕರ್ಮದಿ ಮರಳಿ ಮಾಯಾ ಮೋಹಕೆ ಮೋಹಿಸದೆ ||೧|| ಏಳು ಜನ್ಮಾತರ ಮೇಳೈಸಿದ ಸುಖ ತಾಳಿ ಇಳೆಗೆ ಬಂದು ಬಾಳುವುದಕೆ ನೀ ||೨|| ಲೋಕದಿ ಶಿಶುನಾಳಧೀಶನ ಭಜಿಸುತ ಕಾಕು ವಿಷಯದ ಭೋಗ ಸಾಕು ಸಾಕಿನ್ನೆನ್ನು ||೩|| ****