ರಿಹರ್ಸಲ್ಸ್ ಮುಗಿಸಿ ಮನೆ ಮುಟ್ಟುವಾಗ ರಾತ್ರಿಯ ಹನ್ನೊಂದು ಗಂಟೆಯಾಗಿತ್ತು. ನಾಟಕದ ಕೊನೆಯ ದೃಶ್ಯವನ್ನು ಇಂದು ಹತ್ತು ಸಲ ಮಾಡಿದರೂ ಪ್ರತಿಫಲ ಸಿಗಲಿಲ್ಲವೆಂಬ ಚಿಂತೆ ಮನಸ್ಸನ್ನು ಕಾಡುತ್ತಿದ್ದರೆ ಹತ್ತು ಗಂಟೆ ರಾತ್ರಿಯ ರೈಲು ಪ್ರಯಾಣ ದೇಹವನ್ನು ಆ...

ಗೃಹಸಚಿವ ದಯಾನಂದರಿಗೆ ಕ್ರಾಂತಿಕಾರಿಯರು ಒಂದು ತಲೆನೋವಾಗಿ ಬಿಟ್ಟಿದ್ದರು. ಮುಖ್ಯಮಂತ್ರಿಯವರು ಬಹುದಿನದಿಂದ ತಮ್ಮ ರಾಜ್ಯವನ್ನು ಇಡೀ ದೇಶದಲ್ಲೇ ಒಂದು ಮಾದರಿ ರಾಜ್ಯವಾಗಿ ರೂಪಿಸಲು ಬಹು ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. ಕ್ರಾಂತಿಕಾರಿಯರು ಆ...

ಅದೊಂದು ವಿಚಿತ್ರ ಸ್ಪರ್ಧೆ, ಚೆನ್ನಾಗಿ ಅಳುವವರು ಯಾರು? ಚೆನ್ನಾಗಿ ನಗುವವರು ಯಾರು? ಎಂದು ಸಭೆಯಲ್ಲಿ ಘೋಷಿಸಿದರು. ಹಲವಾರು ಜನರು ಹತ್ತಾರು ವಿಧದಲ್ಲಿ ಅತ್ತು ಪ್ರದರ್ಶಿಸಿದರು. ಕೆಲವರು ಕಣ್ಣೀರಿಟ್ಟರು. ಕೆಲವರು ಕಣ್ಣೀರಿಲ್ಲದೆ ಶಬ್ದದಲ್ಲಿ ಗೊಳೋ...

ಬಹುಮುಖ್ಯವಾದ ಫೈಲುಗಳನ್ನು ಅಟೆಂಡ್ ಮಾಡಿ ಸಾಹೇಬನ ಟೇಬಲ್ಲಿಗೆ ಕಳಿಸಿದರೂ ಮನಸ್ಸಿಗೆ ಉಲ್ಲಾಸವಿಲ್ಲ. ತಲೆತುಂಬಾ ನನ್ನ ಶ್ರೀಮತಿಯೇ ತುಂಬಿಕೊಂಡಿದ್ದಾಳೆ. ಅವಳಿಗದೆಂತಹ ಕಾಯಿಲೆಯೋ ಅರ್ಥವಾಗುತ್ತಿಲ್ಲ. ಪರಿಚಿತ ಡಾಕ್ಟರ ಬಳಿ ತೋರಿಸೋಣವೆಂದು ದಮ್ಮಯ್ಯ...

ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ ಚೆನ್ನಾಗಿರುವುದು ಓಟದಿಂದ ಸ್ಪಷ್ಟವಾಗುತ್ತಿದೆ. ಇಳಿಜಾರ...

ಅವನೊಬ್ಬ ಕಟುಕ, ಮಾಂಸವನ್ನು ಕತ್ತರಿಸಿ ಅಂಗಡಿಯಲ್ಲಿ ತೂಗಿಹಾಕಿ ಮಾರಾಟ ಮಾಡುತ್ತಿದ್ದ. ಅವನು ಮರದ ಹಲಗೆಯ ಮೇಲೆ ಪ್ರಾಣಿಗಳ ಇಡೀ ದೇಹವನ್ನು ಕತ್ತರಿಸುವಾಗ ಅವನ ಹೃದಯ ಸ್ಪಂದಿಸುತ್ತಿರಲಿಲ್ಲ. ಒಮ್ಮೆ ಅವನ ಬೆರಳಿಗೆ ಕತ್ತಿ ಬಿದ್ದು ಬೆರಳು ತುಂಡಾಗಿ ...

ರೈಲು ನಿಲ್ದಾಣದಲ್ಲಿ ನಿಂತಿತು! “ಪೇಪರ! ಡೇಲಿ ಪೇಪರ!……..ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ ಬರುವವರ ಗದ್ದಲ; ಚಹಾ ಮುಂತಾದ ...

ಪಾಳೇಗಾರರ ಮನೆಯಲ್ಲಿ ಉಗ್ರಪ್ಪ ಮೈಲಾರಿಗೆ ಮೈಯೆಲ್ಲಾ ಪುಳುಕ. ‘ಹತ್ತು ನಿಮಿಷ ಆಗೋಯ್ತಣ್ಣಾ. ಇನ್ನೂ ರಂಗ ಬದಕಿರ್ತಾನೆ ಆಂತಿಯಾ?’ ಮೈಲಾರಿಯ ಮನ ಚೆಂಡಿನಂತೆ ಪುಟಿಯಿತು. ‘ನೋ ಚಾನ್ಸ್ ಬ್ರದರ್…. ಅವನು ಯಾವಾಗಲೋ ಪಂಜರದಲ್ಲೇ ಬೈಕ್‌ನ ಅಡಿಬಿದ್...

ಅವಳಿಗೆ ಬೇರೆ ಕೆಲಸವಿರಲಿಲ್ಲ. ತನ್ನ ಗೆಳತಿಯರ ಗಂಡಂದಿರನ್ನು ಗಡಸು, ಕುಡುಕ, ಮೋಸಗಾರ, ನಿರ್‍ದಯಿ, ಕಪಟಿ ಎಂದು ಹೇಳಿ ಲೇಬಲ್ ಹಚ್ಚುತ್ತಿದ್ದಳು. ಅವಳ ಗಂಡನ ಬಗ್ಗೆ ಯಾರಾದರು ಟಿಕೀಸಿದರೆ ಒಡನೆ “ನನ್ನ ಗಂಡ ಹೇಗಿದ್ದರೇನು? ನೀವು ಏನು ಹೇಳಬೇ...

citಸಕ್ಕರೆ, ಬೆಲ್ಲ, ಬೇಳೆ, ಚಹಾಪುಡಿ, ರವಾ ಮುಂತಾದ ಸಾಮಾನುಗಳನ್ನು ಕಾರಿನಲ್ಲಿ ತುಂಬಿಕೊಂಡು ಮಂಜಪ್ಪ ರೈ ವೇಗವಾಗಿ ಮನೆಗೆ ಮರಳುತ್ತಿದ್ದರು. ಡ್ಯಾಶ್ ಬೋರ್ಡಿಗೆ ಜೋಡಿಸಿದ್ದ ಕ್ಯಾಸೆಟ್ ಪ್ಲೇಯರಿನಿಂದ ಬೆಸ್ಟ್ ಆಫ಼್ ರಫ಼ಿ ಹಾಡುಗಳು ಬರುತ್ತಿದ್ದರ...

1...8283848586...147

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...